ADVERTISEMENT

ಬಿಐಎಎಲ್‌ಗೆ ವಾಯುಪಡೆ ರೆಡಾರ್‌ ಕಣ್ಗಾವಲು

ದೇಶದಲ್ಲೇ ಮೊದಲ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 20:13 IST
Last Updated 18 ಡಿಸೆಂಬರ್ 2019, 20:13 IST
ಐಎಎಫ್ ರೇಡಾರ್ ಆಪರೇಟರ್‌ಗಳು ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ನೇಮಕಗೊಂಡ ರಾಡಾರ್ ನಿಯಂತ್ರಕಗಳೊಂದಿಗೆ ಕೆಲಸ ಮಾಡುತ್ತಾರೆ.
ಐಎಎಫ್ ರೇಡಾರ್ ಆಪರೇಟರ್‌ಗಳು ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ನೇಮಕಗೊಂಡ ರಾಡಾರ್ ನಿಯಂತ್ರಕಗಳೊಂದಿಗೆ ಕೆಲಸ ಮಾಡುತ್ತಾರೆ.   

ಬೆಂಗಳೂರು: ಭಾರತೀಯ ವಾಯುಪಡೆಯು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎಎಲ್‌) ತನ್ನ ಕೆಲವು ರೆಡಾರ್‌ಗಳನ್ನು ಶೀಘ್ರವೇ ಅಳವಡಿಸಲಿದೆ.

ವಿಮಾನ ನಿಲ್ದಾಣದ ಎರಡನೇ ರನ್‌ವೇ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವ ವೇಳೆ ಯಾವುದೇ ಅಡೆತಡೆಗಳು (ಮಾರ್ಗ ಉಲ್ಲಂಘನೆ) ಉಂಟಾಗದಂತೆ, ಸಂಪೂರ್ಣ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಈಗಾಗಲೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸ್ಥಾಪಿಸಿರುವ ರೆಡಾರ್‌ ನಿಯಂತ್ರಣ ಕೇಂದ್ರಗಳ ಜತೆಯಲ್ಲಿಯೇ ವಾಯುಪಡೆಯ ರೆಡಾರ್‌ ಹಾಗೂ ನಿಯಂತ್ರಣ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ನಾಗರಿಕ ವಿಮಾನಸೇವೆಗೆ ಸಂಬಂಧಿಸಿ ಸೇನಾ ರೆಡಾರ್‌ಗಳೂ ಒಂದೇ ಕಡೆ ಸ್ಥಾ‍ಪನೆಯಾಗಿ ಕಾರ್ಯನಿರ್ವಹಿಸುತ್ತಿರುವುದು ದೇಶದಲ್ಲೇ ಮೊದಲು ಎಂದು ಸಚಿವಾಲಯ ಹೇಳಿದೆ.

ADVERTISEMENT

ಇದೇ ವ್ಯವಸ್ಥೆಯು ಸಮೀಪದಲ್ಲಿರುವ ಯಲಹಂಕ ವಾಯುನೆಲೆಯ ನಿಲ್ದಾಣಕ್ಕೂ ಕಣ್ಗಾವಲು ಸೌಲಭ್ಯ ಒದಗಿಸಲಿದೆ. ಇದಕ್ಕಾಗಿ ಭಾರತೀಯ ವಾಯುಪಡೆಯು ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಸಂಚಾರ ಸಂಬಂಧಿಸಿ ಪ್ರಾಯೋಗಿಕ ತರಬೇತಿ ನಡೆಸುತ್ತಿದೆ.ವಾಯುಕ್ಷೇತ್ರದಲ್ಲಿ ಹಾರಾಡುವ ವಿಮಾನಗಳು ಕನಿಷ್ಠ ರೆಡಾರ್‌ ಅಂತರವನ್ನು ನಿಖರವಾಗಿ ಕಾಯ್ದುಕೊಳ್ಳಲು ಈ ಕೇಂದ್ರ ನೆರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.