ADVERTISEMENT

ಜಯಲಕ್ಷ್ಮಿ ಅಭಯಕುಮಾರ್ ಅವರ ಆತ್ಮಕಥನ ಬೆಂಕಿಯಲ್ಲಿ ಅರಳಿದ ಹೂವು ಪುಸ್ತಕ ಜನಾರ್ಪಣೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 15:54 IST
Last Updated 21 ಡಿಸೆಂಬರ್ 2025, 15:54 IST
ನಗರದ ಮಂಜುನಾಥೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಪಿ. ಜಯಲಕ್ಷ್ಮಿ ಅಭಯಕುಮಾರ್, ಚಂದ್ರಹಾಸ ರೈ, ಸುರೇಂದ್ರಕುಮಾರ್, ಎಂ. ವೀರಪ್ಪ ಮೊಯಿಲಿ, ನೀಲಾವರ ಸುರೇಂದ್ರ ಅಡಿಗ ಮತ್ತು ಜಾಣಗೆರೆ ವೆಂಕಟರಾಮಯ್ಯ ಪಾಲ್ಗೊಂಡಿದ್ದರು
ಪ್ರಜಾವಾಣಿ ಚಿತ್ರ
ನಗರದ ಮಂಜುನಾಥೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಪಿ. ಜಯಲಕ್ಷ್ಮಿ ಅಭಯಕುಮಾರ್, ಚಂದ್ರಹಾಸ ರೈ, ಸುರೇಂದ್ರಕುಮಾರ್, ಎಂ. ವೀರಪ್ಪ ಮೊಯಿಲಿ, ನೀಲಾವರ ಸುರೇಂದ್ರ ಅಡಿಗ ಮತ್ತು ಜಾಣಗೆರೆ ವೆಂಕಟರಾಮಯ್ಯ ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಭಾರತೀಯ ಧರ್ಮಗಳು ತತ್ವ ಸಿದ್ಧಾಂತಗಳ ಆಧಾರದ ಮೇಲೆ ನಿಂತಿವೆ’ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಹೇಳಿದರು.

ನಿಖಿಲ್ ನಿಶ್ಚಲ್‌ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿ. ಜಯಲಕ್ಷ್ಮಿ ಅಭಯಕುಮಾರ್ ಅವರ ಆತ್ಮಕಥನ ಬೆಂಕಿಯಲ್ಲಿ ಅರಳಿದ ಹೂವು ಪುಸ್ತಕ ಜನಾರ್ಪಣೆಗೊಳಿಸಿ ಅವರು ಮಾತನಾಡಿದರು. 

‘ವಿಶ್ವದಲ್ಲಿರುವ ಎಲ್ಲ ಧರ್ಮಗಳನ್ನು ನಾವು ವಿಮರ್ಶೆ ಮಾಡುವುದಕ್ಕೆ ಆಗುವುದಿಲ್ಲ. ಆದರೆ ಸನಾತನ ಧರ್ಮ ಸಹಬಾಳ್ವೆಯಲ್ಲಿ ನಂಬಿಕೆ ಹೊಂದಿದ್ದು, ಇಡೀ ವಿಶ್ವ ಒಂದೇ ಕುಟುಂಬ ಎಂಬ ಸಂದೇಶ ಸಾರುತ್ತದೆ. ನಮ್ಮಲ್ಲಿ ಇರುವಷ್ಟು ದೇವರು, ಮಹಾತ್ಮರು ಬೇರೆ ಯಾವ ಧರ್ಮಗಳಲ್ಲೂ ಇಲ್ಲ. ಆದ್ದರಿಂದ ನಮ್ಮ ಸಮಾಜದಲ್ಲಿ ವಿವಿಧ ರೀತಿಯ ಆಚಾರ–ವಿಚಾರಗಳು, ಸಂಸ್ಕೃತಿ, ಸಂಪ್ರದಾಯಗಳನ್ನು ನೋಡಬಹುದು’ ಎಂದು ತಿಳಿಸಿದರು. 

ADVERTISEMENT

‘ಜಯಲಕ್ಷ್ಮಿ ಅವರು ತಮ್ಮ ಜೀವನದ ಪ್ರತಿಯೊಂದು ವಿಷಯದ ಮಾಹಿತಿಯನ್ನು ಈ ಪುಸ್ತಕದಲ್ಲಿ ನೀಡಿದ್ದಾರೆ. ಗೃಹಿಣಿಯರು ಇದನ್ನು ಓದಲೇಬೇಕು’ ಎಂದರು.

ಭಾರತೀಯ ಜೈನ್‌ ಮಿಲನ್‌ ಕಾರ್ಯಾಧ್ಯಕ್ಷ ಡಿ.ಸುರೇಂದ್ರ ಕುಮಾರ್, ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಬಂಟರ ಸಂಘದ ಮಾಜಿ ಅಧ್ಯಕ್ಷ ಚಂದ್ರಹಾಸ ರೈ, ಪಿ.ಜಯಲಕ್ಷ್ಮಿ ಅಭಯಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.