ADVERTISEMENT

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ‘ಒಳಾಂಗಣ ಆಂಬುಲೆನ್ಸ್‌’ ಸೇವೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 19:27 IST
Last Updated 11 ಜೂನ್ 2019, 19:27 IST
ಒಳಾಂಗಣ ಆ್ಯಂಬುಲೆನ್ಸ್‌
ಒಳಾಂಗಣ ಆ್ಯಂಬುಲೆನ್ಸ್‌   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೋಗಿಗಳಿಗೆ ತುರ್ತು ಸೇವೆ ಒದಗಿಸಲು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ಒಳಾಂಗಣ ಆಂಬುಲೆನ್ಸ್ ಸೇವೆ ಆರಂಭಿಸಿದೆ.

ಪ್ರಿವೆಲೆನ್ಸ್ ಗ್ರೀನ್ ಸೊಲ್ಯೂಷನ್ಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಆಂಬುಲೆನ್ಸ್‌ಗಳುಬ್ಯಾಟರಿಚಾಲಿತ.

ದಿನದ 24 ಗಂಟೆಗಳೂ ಅಂತರರಾಷ್ಟ್ರೀಯ ಹಾಗೂ ದೇಶಿ ಟರ್ಮಿನಲ್‌ಗಳಲ್ಲಿ ಎರಡು ಆಂಬುಲೆನ್ಸ್‌ಗಳು ಕಾರ್ಯನಿರ್ವಹಿಸಲಿವೆ.

ADVERTISEMENT

ಇದಕ್ಕಾಗಿ ಆ್ಯಸ್ಟರ್ ಆಸ್ಪತ್ರೆಯ ನುರಿತ ವೈದ್ಯರ ತಂಡ ನಿಯೋಜಿಸಲಾಗಿದೆ ಎಂದು ಬಿಐಎಎಲ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಥಾಮಸ್ ಆ್ಯಂಡರ್‍ಸನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.