
ಬೆಂಗಳೂರು: ‘ಮಷಿನ್ ಟೂಲ್ ಉದ್ಯಮದಲ್ಲಿ ತಂತ್ರಜ್ಞಾನಗಳ ಮೌಲ್ಯಮಾಪನ ಮಾಡಲು ಇಂಟೆಕ್ಸ್ ಫಾರ್ಮಿಂಗ್ ಪ್ರದರ್ಶನವು ಒಂದು ಉತ್ತಮ ವೇದಿಕೆ ಆಗಿದೆ’ ಎಂದು ಎಂಜಿನ್ ಕಾಂಪೋನೆಂಟ್ ಡಿವಿಷನ್ ರಾಣೆ (ಮದ್ರಾಸ್) ಲಿಮಿಟೆಡ್‌ನ ಅಧ್ಯಕ್ಷ ಎಸ್. ರಾಜಕುಮಾರ್ ತಿಳಿಸಿದರು.
ಭಾರತೀಯ ಮಷಿನ್ ಟೂಲ್ ತಯಾರಕರ ಸಂಘವು (ಐಎಂಟಿಎಂಎ) ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ ಇಂಟೆಕ್ಸ್ ಫಾರ್ಮಿಂಗ್‌ನ ಒಂಬತ್ತನೇ ಆವೃತ್ತಿಯ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ‘ಜಿಎಸ್‌ಟಿ ಕಡಿತ ಮಾಡಿರುವ ಕಾರಣ ಆಟೊ ಮೊಬೈಲ್‌ಗಳ ಬೇಡಿಕೆ ಹೆಚ್ಚಾಗಿದ್ದು, ಈ ಉದ್ಯಮದ ಉತ್ಪಾದನಾ ಸಾಮರ್ಥ್ಯ ವಿಸ್ತರಿಸಲು ಅನುಕೂಲವಾಗಿದೆ’ ಎಂದು ಹೇಳಿದರು.
ಏಥರ್ ಎನರ್ಜಿ ಸಹಸಂಸ್ಥಾಪಕ ತರುಣ್ ಮೆಹ್ತಾ ಮಾತನಾಡಿ, ‘ನಿರಂತರ ಸಂಶೋಧನೆ ಮತ್ತು ಅಭಿವೃದ್ಧಿಯೊಂದಿಗೆ ಭಾರತವು ಉತ್ಪಾದನಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಬಹುದು’ ಎಂದು ತಿಳಿಸಿದರು.
ಐಎಂಟಿಎಂಎ ಇಂಟೆಕ್ಸ್ ಪ್ರದರ್ಶನದ ಅಧ್ಯಕ್ಷ ಜಮ್ಶೆಡ್ ಗೋದ್ರೆಜ್ ಮಾತನಾಡಿ, ‘ಕೇಂದ್ರ ಸರ್ಕಾರವು ವಿವಿಧ ಯೋಜನೆಗಳ ಮೂಲಕ ಮಷಿನ್ ಟೂಲ್ ಉದ್ಯಮಕ್ಕೆ ಉತ್ತಮ ಆದ್ಯತೆ ನೀಡುತ್ತಿದ್ದು, ಇದು ಭಾರತದ ಆರ್ಥಿಕ ಬೆಳವಣಿಗೆಗೆ ಸಹಕಾರಿ ಆಗಲಿದೆ. ಇಂಟೆಕ್ಸ್ ಪ್ರದರ್ಶನವು ಉದ್ಯಮ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಿದೆ’ ಎಂದರು.
ಐಎಂಟಿಎಂಎ ಅಧ್ಯಕ್ಷೆ ಮೋಹಿನಿ ಖೇಲ್ಕರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.