ADVERTISEMENT

ಏರೋಕಾನ್‌ಗೆ ಚಾಲನೆ: ಅಂತರರಾಷ್ಟ್ರೀಯ ವೈಮಾಂತರಿಕ್ಷ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 3:48 IST
Last Updated 3 ಜೂನ್ 2022, 3:48 IST
ಏರೋಕಾನ್‌ ಸಮ್ಮೇಳನದಲ್ಲಿ ಪ್ರದರ್ಶನಕ್ಕಿಡಲಾಗಿದ್ದ ಡ್ರೋನ್‌ಗಳು
ಏರೋಕಾನ್‌ ಸಮ್ಮೇಳನದಲ್ಲಿ ಪ್ರದರ್ಶನಕ್ಕಿಡಲಾಗಿದ್ದ ಡ್ರೋನ್‌ಗಳು   

ಬೆಂಗಳೂರು: ಅಂತರರಾಷ್ಟ್ರೀಯ ವೈಮಾಂತರಿಕ್ಷ ಸಮ್ಮೇಳನದ ಎರಡನೇ ಆವೃತ್ತಿ ‘ಏರೋಕಾನ್‌–2022’ಕ್ಕೆ ನಗರದಲ್ಲಿ ಬುಧವಾರ ಚಾಲನೆ ನೀಡಲಾಯಿತು.

ಎರಡು ದಿನಗಳ ಈ ಸಮ್ಮೇಳನವನ್ನು ಸೊಸೈಟಿ ಆಫ್ ಆಟೊಮೊಟಿವ್ ಎಂಜಿನಿಯರ್ಸ್‌ ಇಂಡಿಯಾ(ಎಸ್ಎಇಇಂಡಿಯಾ) ಮತ್ತು ಎಸ್ಎಇ ಇಂಟರ್‌ನ್ಯಾಷನಲ್ ಸಹಯೋಗದಲ್ಲಿ ಆಯೋಜಿಸಲಾಗಿದೆ.

ಎಚ್‌ಎಎಲ್‌ ಅಕಾಡೆಮಿಯಲ್ಲಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಹಲವಾರು ದೇಶಿ ಮತ್ತು ವಿದೇಶಿ ವೈಮಾನಿಕ ಮತ್ತು ಬಾಹ್ಯಾಕಾಶ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ADVERTISEMENT

ಡ್ರೋನ್‌ಗಳು, ಮಿನಿ ವಿಮಾನಗಳು, ಹೆಲಿಕಾಪ್ಟರ್‌ಗಳ ಪ್ರದರ್ಶನವನ್ನು ಸಮ್ಮೇಳನದಲ್ಲಿ ಆಯೋಜಿಸಲಾಗಿತ್ತು.

ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಎಸ್ಎಇ ಇಂಡಿಯಾದ ಅಧ್ಯಕ್ಷೆ ರಶ್ಮಿ ಊರ್ಧ್ವರ್ಸೆ, ಎಸ್ಎಇ ಇಂಟರ್‌ನ್ಯಾಷನಲ್‌ನ ಜಾಗತಿಕ ವ್ಯವಹಾರಗಳ ಕಾರ್ಯನಿರ್ವಾಹಕ ಸಲಹೆಗಾರ ಡಾ. ಮುರಳಿ ಅಯ್ಯರ್, ಕಾಲಿನ್ಸ್ ಏರೋಸ್ಪೇಸ್‌ನ ಡಾ.ರವಿಶಂಕರ್ ಮೈಸೂರು, ಎಚ್‌ಎಎಲ್‌ನ ಡಾ.ಶ್ರೀಕಾಂತ್ ಶರ್ಮಾ, ಏರೊನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ (ಎಡಿಎ) ಡಾ.ಗಿರೀಶ್ ಎಸ್. ದೇಡೋಧರೆ, ಬೋಯಿಂಗ್ ಸಂಶೋಧನೆ ಮತ್ತು ತಂತ್ರಜ್ಞಾನ ನಿರ್ದೇಶಕ ಡಾ.ಬಾಲಗುರುನಾ ಚಿದಂಬರಂ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.