ADVERTISEMENT

ದೂರವಾಣಿ ಮೂಲಕ ಆಹ್ವಾನ ನೀಡಲಾಗಿತ್ತು: ಬಿ – ಪ್ಯಾಕ್

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 19:59 IST
Last Updated 10 ಏಪ್ರಿಲ್ 2019, 19:59 IST

ಬೆಂಗಳೂರು: ಲೋಕಸಭೆ ಚುನಾವಣೆಯ ಪೂರ್ವಭಾವಿ ‌‌ಸಂವಾದಕ್ಕೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳನ್ನು ದೂರವಾಣಿ ಮೂಲಕವೇ ಆಹ್ವಾನಿಸಲಾಗಿತ್ತು ಎಂದು ಬಿ ಪ್ಯಾಕ್ ಸ್ಪಷ್ಟಪಡಿಸಿದೆ.

ಬೆಂಗಳೂರು ಕೇಂದ್ರ ಮತ್ತು ಉತ್ತರ ಕ್ಷೇತ್ರದ ಅಭ್ಯರ್ಥಿಗಳ ಕಚೇರಿಗೆ ಇ–ಮೇಲ್ ಮತ್ತು ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಲಾಗಿತ್ತು. ಕಾರ್ಯಕ್ರಮ ಆರಂಭವಾಗುವವರೆಗೆ ಸತತ ಸಂಪರ್ಕದಲ್ಲಿ ಇರಲಾಗಿತ್ತು. ಎಲ್ಲರೂ ಚುನಾವಣಾ ಪ್ರಚಾರದಲ್ಲಿ ಮಗ್ನರಾಗಿದ್ದರು. ಯಾರನ್ನು ಖುದ್ದು ಸಂಪರ್ಕಿಸಿ ಆಹ್ವಾನಿಸಿರಲಿಲ್ಲ ಎಂದು ಹೇಳಿದೆ.

ಬಿ ಪ್ಯಾಕ್ ಮಂಗಳವಾರ ಆಯೋಜಿಸಿದ್ದ ಸಂವಾದಕ್ಕೆ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದಗೌಡ ಗೈರಾಗಿದ್ದರು. ‘ಅಧಿಕೃತ ಆಹ್ವಾನ ಇಲ್ಲದ ಕಾರಣ ಅವರು ಪೂರ್ವ ನಿರ್ಧಾರಿತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಸಂವಾದಕ್ಕೆ ಬರಲಾಗಲಿಲ್ಲ’ ಎಂದು ಸದಾನಂದಗೌಡರ ಆಪ್ತ ಸಹಾಯಕರು ತಿಳಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.