ADVERTISEMENT

ಕ್ರಿಕೆಟ್ ಬೆಟ್ಟಿಂಗ್: ಇಬ್ಬರ ಬಂಧನ, ₹13.50 ಲಕ್ಷ ಜಪ್ತಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 3:26 IST
Last Updated 27 ಅಕ್ಟೋಬರ್ 2020, 3:26 IST
ಬಂಧಿತ ಆರೋಪಿಗಳಾದ ಹೊಯ್ಸಳಗೌಡ ಹಾಗೂ ನರಸಿಂಹಮೂರ್ತಿ
ಬಂಧಿತ ಆರೋಪಿಗಳಾದ ಹೊಯ್ಸಳಗೌಡ ಹಾಗೂ ನರಸಿಂಹಮೂರ್ತಿ   

ಬೆಂಗಳೂರು: ಐಪಿಎಲ್ ಕ್ರಿಕೆಟ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ₹ 13.50 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

ಸಹಕಾರ ನಗರದ ಹೊಯ್ಸಳಗೌಡ (48) ಹಾಗೂ ವೈಯಾಲಿಕಾವಲ್‌ನ ನರಸಿಂಹಮೂರ್ತಿ (38) ಬಂಧಿತರು.

‘ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದ ವೇಲೆ ಸೋಲು- ಗೆಲುವು ಲೆಕ್ಕಾಚಾರದಲ್ಲಿ ಆರೋಪಿಗಳು ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದರು’ ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

ADVERTISEMENT

‘ಗೆದ್ದವರಿಗೆ ತಾವೇ ಹೋಗಿ ಹಣ ನೀಡುತ್ತಿದ್ದರು. ಸೋತವರಿಂದ ಹಣ ವಸೂಲಿ ಮಾಡಲು ಸಹ ತಾವೇ ಹೋಗುತ್ತಿದ್ದರು. ಇತ್ತೀಚೆಗೆ ಮಲ್ಲೇಶ್ವರ ಬಳಿ ಆರೋಪಿಗಳು ಹಣ ಕಟ್ಟಿಸಿಕೊಳ್ಳಲು ಬಂದಿದ್ದಾಗ ದಾಳಿ ಮಾಡಿ ಬಂಧಿಸಲಾಯಿತು’ ಎಂದೂ ತಿಳಿಸಿದರು.

‘ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಆರಂಭವಾದಾಗಿನಿಂದಲೂ ಆರೋಪಿಗಳು ಬೆಟ್ಟಿಂಗ್ ನಡೆಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.