ADVERTISEMENT

'ಆ್ಯಪ್‌' ಬಳಸಿ ಕ್ರಿಕೆಟ್ ಬೆಟ್ಟಿಂಗ್; ಬುಕ್ಕಿ ಬಂಧನ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 20:03 IST
Last Updated 1 ಏಪ್ರಿಲ್ 2019, 20:03 IST
ವಿಶ್ವನಾಥ್
ವಿಶ್ವನಾಥ್   

ಬೆಂಗಳೂರು: ಮೊಬೈಲ್ ಆ್ಯಪ್‌ ಬಳಸಿಕೊಂಡು ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ನಡೆಸುತ್ತಿದ್ದ ಆರೋಪದಡಿ ವಿಶ್ವನಾಥ್ (35) ಎಂಬಾತನನ್ನು ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

‘ಹೆಗ್ಗನಹಳ್ಳಿಯ ಕಪಿಲಾನಗರದ ನಿವಾಸಿಯಾದ ವಿಶ್ವನಾಥ್, ಜನರಿಂದ ಹಣ ಕಟ್ಟಿಸಿಕೊಂಡು ಬೆಟ್ಟಿಂಗ್ ಆಡಿಸುವ ಬುಕ್ಕಿ ಆಗಿದ್ದ. ಆತನಿಂದ ₹1.89 ಲಕ್ಷ ನಗದು ಹಾಗೂ ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ಸನ್‍ ರೈಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಭಾನುವಾರ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆಯಲ್ಲೇ ಆರೋಪಿ ಬೆಟ್ಟಿಂಗ್ ನಡೆಸಿದ್ದ. ತಂಡಗಳ ಸೋಲು ಮತ್ತು ಗೆಲುವಿನ ಬಗ್ಗೆ ಸಾರ್ವಜನಿಕರಿಂದ ಹಣ ಕಟ್ಟಿಸಿಕೊಂಡಿದ್ದ. ಕೆಲವರಿಗೆ ಹಣ ಕೊಡದೇ ವಂಚಿಸಿದ್ದ. ಆತನ ಮನೆ ಮೇಲೆಯೇ ದಾಳಿ ಮಾಡಿ ಬಂಧಿಸಲಾಯಿತು’ ಎಂದು ಮಾಹಿತಿ ನೀಡಿದರು.

ADVERTISEMENT

ಕನಿಷ್ಠ ₹5000 ಬೆಟ್ಟಿಂಗ್:‘ತನಗೆ ಪರಿಚಯವಿರುವ ಜನರಿಂದ ಮಾತ್ರ ಆರೋಪಿ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದ. ಕನಿಷ್ಠ ₹5,000 ನಿಗದಿ ಮಾಡಿದ್ದ’ ಎಂದು ಅಧಿಕಾರಿ ಹೇಳಿದರು.

‘ಬೆಟ್ಟಿಂಗ್‌ ಕಟ್ಟುವವರ ಮೊಬೈಲ್‌ನಲ್ಲಿ ಆ್ಯಪ್ ಇನ್‌ಸ್ಟಾಲ್‌ ಮಾಡಿಸುತ್ತಿದ್ದ ಆರೋಪಿ, ಅವರಿಗೆ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ನೀಡುತ್ತಿದ್ದ. ಅದೇ ಆ್ಯಪ್‌ ಬಳಸಿ ಸಾರ್ವಜನಿಕರಿಂದ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದ. ಅದೇ ಹಣವನ್ನು ಇನ್ನೊಬ್ಬ ಬುಕ್ಕಿ ನಿತಿನ್ ಎಂಬಾತನಿಗೆ ಕೊಟ್ಟು ಕಮಿಷನ್ ಪಡೆಯುತ್ತಿದ್ದ. ಆ ನಿತಿನ್ ಸದ್ಯ ತಲೆಮರೆಸಿಕೊಂಡಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.