ADVERTISEMENT

ಐಆರ್‌ಸಿಟಿಸಿ ಪ್ರವಾಸ ಪ್ಯಾಕೇಜ್‌ ವಿವರ ಪ್ರಕಟ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2019, 5:32 IST
Last Updated 26 ಫೆಬ್ರುವರಿ 2019, 5:32 IST
   

ಬೆಂಗಳೂರು: ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ) ವತಿಯಿಂದ ವಿವಿಧ ಪ್ರವಾಸ ಯೋಜನೆಗಳನ್ನು ಪ್ರಕಟಿಸಲಾಗಿದೆ. ವಿವರ ಹೀಗಿದೆ.

ಶಿರಡಿ ವಿಶೇಷ ರೈಲು ಪ್ರವಾಸ: ಈ ಯೋಜನೆಯಲ್ಲಿ ಪಂಡರಪುರ -ಶಿರಡಿ - ಮಂತ್ರಾಲಯ ಕ್ಷೇತ್ರಗಳಿಗೆ ಯಾತ್ರೆ ಕೈಗೊಳ್ಳಬಹುದು. ಸ್ಲೀಪರ್‌ ಕ್ಲಾಸ್‌ ರೈಲು ಪ್ರಯಾಣ, ರಾತ್ರಿ ಉಳಿಯಲು ಬಹು ಹಂಚಿಕೆ ಆಧಾರದಲ್ಲಿ ಧರ್ಮಶಾಲೆ, ಹಾಲ್‌ ಅಥವಾ ಡಾರ್ಮಿಟರಿ ವ್ಯವಸ್ಥೆ ಇದೆ. ಊಟ ಉಪಾಹಾರ ಇರಲಿದೆ. ಬಸ್‌ಗಳ ಮೂಲಕ ಸ್ಥಳೀಯ ಸ್ಥಳಗಳ ವೀಕ್ಷಣೆ ಸೌಲಭ್ಯ ಇರಲಿದೆ.

ರಾಮಾಯಣ ಯಾತ್ರೆ: ನೇಪಾಳ ಮತ್ತು ಶ್ರೀಲಂಕಾ (ಶ್ರೀಲಂಕಾ ರಾಮಾಯಣ ಯಾತ್ರೆ) ಯಾತ್ರೆಯನ್ನೂ ಹಮ್ಮಿಕೊಂಡಿದೆ. ವಿಮಾನದ ಮೂಲಕ ಈ ಯಾತ್ರೆ ನಡೆಯಲಿದೆ. ಈ ಪ್ಯಾಕೇಜ್‌ನಲ್ಲಿ ಪ್ರವಾಸಿ ವೀಸಾ, ವಿಮಾನ ಟಿಕೆಟ್, ಮೂರು ಸ್ಟಾರ್ ಹೋಟೆಲ್ ಸೌಕರ್ಯ, ಸ್ಥಳೀಯ ಗೈಡ್, ಪ್ರವಾಸ ವಿಮೆ, ಆಹಾರ, ಪ್ರವಾಸ ಸ್ಥಳಗಳ ಎಲ್ಲಾ ಪ್ರವೇಶ ಶುಲ್ಕ ಒಳಗೊಂಡಿದೆ.

ADVERTISEMENT

ಹೆಚ್ಚಿನ ಮಾಹಿತಿಗಾಗಿ:ಬೆಂಗಳೂರು: 080-22960014/ 13,ಮೊ. 9746743045.

ವೆಬ್‌ಸೈಟ್‌: www.irctctourism.com

**

ಪ್ರವಾಸ ಹೊರಡುವ ದಿನಾಂಕ:ಮಾರ್ಚ್‌ 13
ದಿನಗಳು:5 ರಾತ್ರಿ, 6 ದಿನ
ಸ್ಥಳಗಳು:ಶಿರಡಿ –ಪಂಡರಪುರ– ಮಂತ್ರಾಲಯ
ಪ್ಯಾಕೇಜ್ ವೆಚ್ಚ:₹ 5,670

ಪ್ರವಾಸ ಹೊರಡುವ ದಿನಾಂಕ:ಮಾರ್ಚ್‌ 15,22
ದಿನಗಳು:2 ರಾತ್ರಿ, 3 ದಿನ
ಸ್ಥಳಗಳು:ಶಿರಡಿ, ನಾಸಿಕ್‌, ತ್ರಿಯಂಬಕೇಶ್ವರ, ಪಂಚವಟಿ, ಶನಿಸಿಂಗ್ಣಾಪುರ
ಪ್ಯಾಕೇಜ್ ವೆಚ್ಚ:₹10,200

ಪ್ರವಾಸ ಹೊರಡುವ ದಿನಾಂಕ:ಮಾರ್ಚ್‌ 21
ದಿನಗಳು:5 ರಾತ್ರಿ, 6 ದಿನ
ಸ್ಥಳಗಳು:ಶ್ರೀಲಂಕಾ ರಾಮಾಯಣ ವಿಮಾನ ಯಾತ್ರೆ
ಪ್ಯಾಕೇಜ್ ವೆಚ್ಚ:₹ 42,250

ಪ್ರವಾಸ ಹೊರಡುವ ದಿನಾಂಕ:ಮಾರ್ಚ್‌ 28
ದಿನಗಳು:5 ರಾತ್ರಿ, 6 ದಿನ
ಸ್ಥಳಗಳು:ನೇಪಾಳ ದರ್ಶನ ವಿಮಾನ ಯಾತ್ರೆ
ಪ್ಯಾಕೇಜ್ ವೆಚ್ಚ:₹ 37,300

ಪ್ರವಾಸ ಹೊರಡುವ ದಿನಾಂಕ:ಏ. 20
ದಿನಗಳು:5 ರಾತ್ರಿ, 6 ದಿನ
ಸ್ಥಳಗಳು:ಅಸ್ಸಾಮ್- ಮೇಘಾಲಯ ವಿಮಾನ ಪ್ಯಾಕೇಜ್
ಪ್ಯಾಕೇಜ್ ವೆಚ್ಚ:₹ 36,800

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.