ADVERTISEMENT

ಬೆಂಗಳೂರು: ಮೇಘನಾ ಬಿರಿಯಾನಿ ಹೋಟೆಲ್‌ಗಳ ಮೇಲೆ ಐ.ಟಿ ದಾಳಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2024, 5:55 IST
Last Updated 19 ಮಾರ್ಚ್ 2024, 5:55 IST
ಆದಾಯ ತೆರಿಗೆ ಇಲಾಖೆ
ಆದಾಯ ತೆರಿಗೆ ಇಲಾಖೆ   

ಬೆಂಗಳೂರು: ಹೈದರಾಬಾದ್‌ನ ಮೇಘನಾ ಫುಡ್ಸ್‌ ಸಮೂಹದ ಬಿರಿಯಾನಿ ಹೋಟೆಲ್‌ಗಳ ಮೇಲೆ ಮಂಗಳವಾರ ದಾಳಿ ನಡೆಸಿರುವ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು, ಇಡೀ ದಿನ ಶೋಧ ನಡೆಸಿದರು.

ಕೋರಮಂಗಲ, ಇಂದಿರಾನಗರ, ಜಯನಗರ, ರೆಸಿಡೆನ್ಸಿ ರಸ್ತೆ, ಮಾರತ್ತಹಳ್ಳಿ ಸೇರಿದಂತೆ ಬೆಂಗಳೂರಿನ ಹಲವೆಡೆ ಮೇಘನಾ ಫುಡ್ಸ್‌ನ ಹೋಟೆಲ್‌ಗಳಿವೆ. ನಗರದಲ್ಲಿರುವ ಎಂಟಕ್ಕೂ ಹೆಚ್ಚು ಮಳಿಗೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೇಘನಾ ಫುಡ್ಸ್‌ 2006ರಿಂದಲೂ ಬೆಂಗಳೂರಿನಲ್ಲಿ ಹೋಟೆಲ್‌ ವಹಿವಾಟು ನಡೆಸುತ್ತಿದೆ. ಆದಾಯ ತೆರಿಗೆ ಇಲಾಖೆಯ ಕರ್ನಾಟಕ– ಗೋವಾ ವಲಯದ ಅಧಿಕಾರಿಗಳು ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ನಸುಕಿನ 5 ಗಂಟೆ ಸುಮಾರಿಗೆ ಆರಂಭವಾದ ಕಾರ್ಯಾಚರಣೆ ರಾತ್ರಿಯವರೆಗೂ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.