ADVERTISEMENT

ಬೆಂಗಳೂರಲ್ಲಿ ಹದಗೆಟ್ಟ ರಸ್ತೆಗಳು: 'ಇದು ನಾಚಿಕೆಗೇಡು' ಎಂದ ಕಿರಣ್ ಮಜುಂದಾರ್ ಶಾ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 12:00 IST
Last Updated 8 ಜೂನ್ 2022, 12:00 IST
ಮಜುಂದಾರ್ ಶಾ
ಮಜುಂದಾರ್ ಶಾ   

ಬೆಂಗಳೂರು:ರಾಜಧಾನಿಯ ಹದಗೆಟ್ಟ ರಸ್ತೆಗಳ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಇದೀಗ ಮತ್ತೊಮ್ಮೆ ಟ್ವೀಟ್‌ ಮೂಲಕ ರಾಜಕಾರಣಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಅವರುಹದಗೆಟ್ಟ ರಸ್ತೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಮತ್ತೊಮ್ಮೆ ಅದೇ ವಿಚಾರವನ್ನಿಟ್ಟುಕೊಂಡು ಟ್ವೀಟ್ ಮಾಡಿದ್ದಾರೆ.

ಶ್ರೀರಾಮ್‌ ಬಿ.ಎನ್‌ ಎಂಬುವರುಬೆಂಗಳೂರು-ಮೈಸೂರು ನಡುವಿನ ರಸ್ತೆಯ ನೈಸ್ ರಸ್ತೆ ಜಂಕ್ಷನ್ ಸಮೀಪದಲ್ಲಿ ಹತ್ತಾರು ಗುಂಡಿಗಳು ಬಿದ್ದಿರುವುದನ್ನು ವಿಡಿಯೊ ಮಾಡಿ ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ಅನ್ನು ರಿಟ್ವೀಟ್ ಮಾಡಿರುವಕಿರಣ್ ಮಜುಂದಾರ್ ಶಾ ಅವರು'ಇದು ಆಘಾತಕಾರಿ ಮತ್ತು ನಾಚಿಕೆಗೇಡು' ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಹಿಂದೆಹುಸ್ಕೂರು-ಸರ್ಜಾಪುರ ಸುತ್ತಮುತ್ತಲಿನ ಹದಗೆಟ್ಟ ರಸ್ತೆಗಳ ಬಗ್ಗೆಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿ,ಶಾಸಕರು, ಸಂಸದರು ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿಯ ಜವಾಬ್ದಾರಿಯ ಕೊರತೆಯಿಂದಾಗಿ ರಸ್ತೆ ಹದಗೆಟ್ಟಿದೆ ಎಂದು ನಿರಾಸೆ ವ್ಯಕ್ತಪಡಿಸಿದ್ದರು. ಇದೇ ರಸ್ತೆಯಲ್ಲಿ ಬಸ್‌ ಡಿಪೋ ಇದೆ. ಆದರೆ ವಾಹನಗಳು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿಯಿದೆ. ಇದು ಸ್ಥಳೀಯ ಆಡಳಿತಕ್ಕೆ ನಾಚಿಕೆಯ ಸಂಗತಿ ಎಂದು ಟ್ವೀಟ್‌ನಲ್ಲಿ ಕುಟುಕಿದ್ದರು.

ಕಿರಣ್ ಮಜುಂದಾರ್ ಶಾ ಅವರು ಮಾಡಿರುವ ರಿಟ್ವೀಟ್‌ ಅನ್ನು ಬೆಂಗಳೂರಿನ ಸಾವಿರಾರು ಜನರು ಶೇರ್‌ ಮಾಡುತ್ತಿದ್ದು ಸ್ಥಳೀಯ ರಾಜಕಾರಣಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.