ADVERTISEMENT

ಜಮಾತೆ ಇಸ್ಲಾಮಿ ಹಿಂದ್‌ನಿಂದ ಸೌಹಾರ್ದ ಅಭಿಯಾನ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 19:41 IST
Last Updated 14 ನವೆಂಬರ್ 2018, 19:41 IST

ಬೆಂಗಳೂರು: ಸಮಾಜದಲ್ಲಿನ ಪರಸ್ಪರ ಅಪನಂಬಿಕೆ, ದ್ವೇಷ, ಪೂರ್ವಗ್ರಹ ಭಾವಗಳನ್ನು ಹೋಗಲಾಡಿಸಲು ಜಮಾತೆ ಇಸ್ಲಾಮಿ ಹಿಂದ್‌ ಕರ್ನಾಟಕ ಸಂಘಟನೆಯು ನ.16ರಿಂದ 30ರವರೆಗೆ ಅಭಿಯಾನವೊಂದನ್ನು ನಡೆಸುತ್ತಿದೆ.

‘ಪ್ರವಾದಿ ಮುಹಮ್ಮದ್‌–ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ಹೆಸರಿನ ಈ ಅಭಿಯಾನವು ರಾಜ್ಯದ ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ನಡೆಯಲಿದೆ. ಅಭಿಯಾನದಲ್ಲಿ ಸಮ್ಮೇಳನ, ವಿಚಾರಗೋಷ್ಠಿ, ವಸ್ತುಪ್ರದರ್ಶನ, ಸ್ವಚ್ಛತಾ ಅಭಿಯಾನ, ಸಸಿ ನೆಡುವುದು, ಸೌಹಾರ್ದಕ್ಕಾಗಿ ಮಾನವ ಸರಪಳಿ ರಚಿಸುವ ಕಾರ್ಯಕ್ರಮಗಳು ಇರಲಿವೆ’ ಎಂದು ಸಂಘಟನೆಯ ಅಧ್ಯಕ್ಷ ಮುಹಮ್ಮದ್‌ ಅತ್ಥರ್‌ವುಲ್ಲಾ ಶರೀಫ್‌ ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗಾಗಿ ಅಭಿಯಾನದಲ್ಲಿ ಪ್ರಬಂಧ ರಚನೆ ಮತ್ತು ರಸಪ್ರಶ್ನೆ ಸ್ಪರ್ಧೆಗಳು ಇರಲಿವೆ.

ADVERTISEMENT

‘ದ್ವೇಷ, ಹಿಂಸೆ ಹಾಗೂ ಅಸೂಯೆಗಳು ಸಾಮಾನ್ಯವಾಗಿರುವ ಇಂದಿನ ದಿನಮಾನದಲ್ಲಿ ಪ್ರವಾದಿ ಮುಹಮ್ಮದ್‌ ಅವರ ಬೋಧನೆ ಹಾಗೂ ಸಂದೇಶಗಳ ಪ್ರಸ್ತುತತೆಯನ್ನುಜನರಿಗೆ ಮನವರಿಕೆ ಮಾಡಿಕೊಡಲು ಈ ಅಭಿಯಾನ ಸಹಕಾರಿ ಆಗಲಿದೆ’ ಎಂದು ನಗರದ ಜಾಮಿಯಾ ಮಸೀದಿಯ ಮೌಲಾನಾ ಮಕ್ಸೂದ್‌ ಇಮ್ರಾನ್‌ ರಷಾದಿ ಅಭಿಪ್ರಾಯಪಟ್ಟರು.

ಹೆಚ್ಚಿನ ಮಾಹಿತಿಗೆ:http://satyasandesha.com/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.