ADVERTISEMENT

ಸಿಂಗಪುರದ ವಿವಿ– ಆಚಾರ್ಯ ಸಂಸ್ಥೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 11 ಮೇ 2019, 20:00 IST
Last Updated 11 ಮೇ 2019, 20:00 IST
ನಗರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಆಚಾರ್ಯ ಶಿಕ್ಷಣ ಸ‌ಂಸ್ಥೆ ಹಾಗೂ ಜೇಮ್ಸ್‌ ಕುಕ್‌ ವಿವಿ ಸಿಬ್ಬಂದಿ ಶೈಕ್ಷಣಿಕ ಒಪ್ಪಂದಕ್ಕೆ ಸಹಿ ಮಾಡಿದರು. (ಎಡದಿಂದ) ಜೇಮ್ಸ್‌ಕುಕ್‌ ವಿವಿ ಪ್ರಾಧ್ಯಾಪಕಿ ಸಿಮೋನ ಅಜ್ಜಾಲಿ, ನಿರ್ದೇಶಕ ಆ್ಯಂಡ್ರ್ಯೂಚ್ಯೂ, ಉಪಕುಲಪತಿ ಪ್ರೊ.ಕ್ರಿಸ್‌ ರುಡ್‌, ಆಚಾರ್ಯ ಶಿಕ್ಷಣ ಸಂಸ್ಥೆಯ ಉಪನಿರ್ದೇಶಕ ಇಕ್ಬಾಲ್‌ ಅಹ್ಮದ್‌ ಹಾಗೂ ಸಹಾಯಕ ಪ್ರಾಧ್ಯಾಪಕ ಮರೀಗೌಡ ಇದ್ದರು 

ಬೆಂಗಳೂರು: ನಗರದ ಆಚಾರ್ಯ ಶಿಕ್ಷಣ ಸಂಸ್ಥೆಯು ಸಿಂಗಪುರದಜೇಮ್ಸ್‌ ಕುಕ್‌ ವಿಶ್ವವಿದ್ಯಾಲಯದ ಜೊತೆಗೆ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿದೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಎರಡೂ ವಿಶ್ವವಿದ್ಯಾಲಯಗಳ ಮುಖ್ಯಸ್ಥರು ಒಪ್ಪಂದಕ್ಕೆ ಸಹಿ ಮಾಡಿದರು.

ಬಳಿಕ ಮಾತನಾಡಿದಆಚಾರ್ಯ ಶಿಕ್ಷಣ ಸಂಸ್ಥೆಯ ಅಂತರರಾಷ್ಟ್ರೀಯ ಸಹಯೋಗದ ಉಪನಿರ್ದೇಶಕ ಇಕ್ಬಾಲ್‌ ಅಹ್ಮದ್‌,‘ ಶಿಕ್ಷಣವನ್ನು ಜಾಗತೀಕರಣಕ್ಕೆ ಒಳಪಡಿಸುವುದು ಒಪ್ಪಂದದ ಮುಖ್ಯ ಉದ್ದೇಶ’ ಎಂದರು.

‘ಒಪ್ಪಂದದ ಅನ್ವಯಎರಡೂ ವಿಶ್ವವಿದ್ಯಾಲಯಗಳಅಂತರಶಿಕ್ಷಣ ಹಾಗೂ ಪರಿಣಿತರ ಸೇವೆಯನ್ನು ವಿನಿಮಯ ಮಾಡಿಕೊಳ್ಳಲಾಗುವುದು. ಇಲ್ಲಿನ ಉಪನ್ಯಾಸಕರು ಸಿಂಗಪುರಕ್ಕೆ ತೆರಳಿ ಅಲ್ಲಿನ ಶಿಕ್ಷಣ ವ್ಯವಸ್ಥೆ ಬಗ್ಗೆ ತರಬೇತಿ ಪಡೆಯಲಿದ್ದಾರೆ.ಜೇಮ್ಸ್‌ ವಿವಿ ಪ್ರಾಧ್ಯಾಪಕರು ಆಚಾರ್ಯ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಿದ್ದಾರೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.