ADVERTISEMENT

ಕೊರೊನಾ: ಜನಮನ ಅಭಿಯಾನ

​ಪ್ರಜಾವಾಣಿ ವಾರ್ತೆ
Published 17 ಮೇ 2021, 18:55 IST
Last Updated 17 ಮೇ 2021, 18:55 IST

ಬೆಂಗಳೂರು: ಜನ ಮಾಧ್ಯಮ ಸಂಸ್ಥೆಯು ಆನ್‌ಲೈನ್‌ನಲ್ಲಿ ‘ಕೊರೊನಾ ಜನಮನ ಅಭಿಯಾನ‘ ಹಮ್ಮಿಕೊಂಡಿದೆ.

ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ‌‘ಸರ್ಕಾರದ ಜವಾಬ್ದಾರಿ ಮತ್ತು ಜನತೆ‘ ವಿಷಯ ಕುರಿತು ಅಭಿಯಾನ ನಡೆಯಲಿದ್ದು, ಕೊರೊನಾ ನಿಯಂತ್ರಿಸಲು ಸರ್ಕಾರದ ಜವಾಬ್ದಾರಿ, ಜನಸಾಮಾನ್ಯರಿಗೆ ಇರಬೇಕಾದ ಅರಿವಿನ ಬಗ್ಗೆ ಜನರು ತಮ್ಮ ಅಭಿಪ್ರಾಯಗಳನ್ನು ಜನ ಮಾಧ್ಯಮ ಸಂಸ್ಥೆಗೆ (94483–24727) ಕಳುಹಿಸಬಹುದು‘ ಎಂದು ಸಂಸ್ಥೆಯ ಬಿ. ರಾಜಶೇಖರ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಡಿನ ಗಣ್ಯರು ಮತ್ತು ಆಸಕ್ತರ ಅಭಿಪ್ರಾಯವನ್ನು ಪೋಸ್ಟರ್‌ ವಿನ್ಯಾಸದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುವುದು. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ತಮ್ಮ ಅಭಿಪ್ರಾಯದ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.