ADVERTISEMENT

ಯಾವ ಕಾಲದ ದುಡ್ಡು: ರಾಜ್ಯಕ್ಕೆ ಕೇಂದ್ರ ನೀಡಿರುವ ಅನುದಾನದ ಬಗ್ಗೆ ದೇವೇಗೌಡ ಅನುಮಾನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 8:59 IST
Last Updated 10 ಅಕ್ಟೋಬರ್ 2019, 8:59 IST
   

ಬೆಂಗಳೂರು: ಕೇಂದ್ರ ಇದೀಗ ನೀಡಿರುವ ₹1200 ಕೋಟಿ ಅನುದಾನವು ಕುಮಾರಸ್ವಾಮಿ ಅವಧಿಯಲ್ಲಿ ಪ್ರಸ್ತಾಪಿಸಿದ ಪರಿಹಾರ ಮೊತ್ತ ಇರಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.

ಯಡಿಯೂರಪ್ಪ ಹೇಳಿದಂತೆ ಅಪ್ಪ, ಮಗ ಸೇರಿ ಸಿದ್ಧರಾಮಯ್ಯ ಅವರನ್ನು ಮುಗಿಸುವುದು ಸಾಧ್ಯವಿದೆಯೇ?
ಮೂಲೆಗೆ ಕೂಡಿಸುವುದು ಜನತೆ. ಉಳಿದ ಯಾರಿಗೂ ಆ ಶಕ್ತಿ ಇಲ್ಲ ಎಂದು ಅವರು ಗುರುವಾರ ಇಲ್ಲಿ ನೆರೆ ಪರಿವಾರದಲ್ಲಿನ ನಿರ್ಲಕ್ಷ್ಯ ಖಂಡಿಸಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ತಿಳಿಸಿದರು.

ದೇವೇಗೌಡರ ಬಳಿಕವೂ ಪಕ್ಷ ಉಳಿಯಬೇಕು. ಈ ಪಕ್ಷ ರಾಜ್ಯದ ಒಳಿತಿಗಾಗಿ ಮುಂದೆಯೂ ಇರಬೇಕಾಗಿದೆ ಎಂದರು.

ADVERTISEMENT

ಜೆಡಿಎಸ್ ಸಭೆ ಆರಂಭ:ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಖಂಡಿಸಿ ಜೆಡಿಎಸ್ ವತಿಯಿಂದನಗರದ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನಾ ಸಭೆ ಆರಂಭವಾಯಿತು.

87 ವರ್ಷದ ಪಕ್ಷದ ವರಿಷ್ಠ ಎಚ್. ಡಿ. ದೇವೇಗೌಡ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ಬಳಿಕ ಈ ಸಭೆ ಆರಂಭವಾಗಿದೆ.

ಪಕ್ಷದ ಕಚೇರಿಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಆರಂಭಿಸಿದ ದೇವೇಗೌಡರು ಆನಂದ ರಾವ್ ವೃತ್ತದ ಗಾಂಧಿ ಪ್ರತಿಮೆ ತನಕ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಬಂದರು. ಅಲ್ಲಿ ಗಾಂಧಿ ಪ್ರತಿಮೆಗೆ ಹಾರ ಹಾಕಿದ ಬಳಿಕ ದೇವೇಗೌಡರು ಪಾದಯಾತ್ರೆ ಮೂಲಕ ಫ್ರೀಡಂ ಪಾರ್ಕ್ ನತ್ತ ಬಂದರು.

ಆರಂಭದಲ್ಲಿ ಮನನ ಮಾತನಾಡಿದ ಪಕ್ಷದ ವಕ್ತಾರ ವೈ. ಎಸ್. ದತ್ತ ಮಾತನಾಡಿ, ಮಾಧ್ಯಮಗಳ ನಿರ್ಬಂಧದ ವಿರುದ್ಧ ಉಗ್ರ ಹೋರಾಟ ನಡೆಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.