ಪ್ರಾತಿನಿಧಿಕ ಚಿತ್ರ
ಕೃಪೆ: Gemini AI
ಬೆಂಗಳೂರು: ಸಂಯುಕ್ತ ಸ್ವಕುಳಸಾಳಿ ಸಂಘದ ಆಶ್ರಯದಲ್ಲಿ ಸ್ವಕುಳಸಾಳಿ ಸಮಾಜದ ಮೂಲಪುರುಷ ‘ಶ್ರೀಜಿಹ್ವೇಶ್ವರರ ಜಯಂತಿ’ಯನ್ನು ನಗರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ವನಕಲ್ಲು ಮಲ್ಲೇಶ್ವರಮಠದ ಬಸವ ರಮಾನಂದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ, ಜಿಹ್ವೇಶ್ವರರ ಕುರಿತು ಪ್ರವಚನ ನೀಡಿದರು.
ಲೇಖಕ ಸುಬ್ರಹ್ಮಣ್ಯಂ ಕೆಂದೋಳೆ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿರುವ ಸ್ವಕುಳಸಾಳಿ ಮೂಲ ಪುರುಷ ಜಿಹ್ವೇಶ್ವರರ ಕುರಿತ ‘ಮೂಲಸ್ತಂಭ ಸಾಳೀ ಮಹಾತ್ಮ ಪುರಾಣ’ ಗ್ರಂಥವನ್ನು ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಜನಾರ್ಪಣೆ ಮಾಡಿದರು. ಲೇಖಕ ಸುಬ್ರಹ್ಮಣ್ಯಂ ಕೆಂದೋಳೆ ಹಾಗೂ ಅನುವಾದಕ್ಕೆ ಸಹಕರಿಸಿದ ಪ್ರಕಾಶ ಪರಾಂಜಪೆ ಅವರನ್ನು ಸನ್ಮಾನಿಸಲಾಯಿತು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸೂರ್ಯನಾರಾಯಣ ಸರೋದೆ, ಡಾ.ನಾಗೇಶ್ ಚಿಲ್ಲಾಳ್, ಗೋಪಾಲ ಕ್ಷೀರಸಾಗರ, ಹರಿದಾಸ ಜುಜಾರೆ, ನರಹರಿ ಕೆಂದೋಳೆ, ಮಲ್ಲಿಕಾರ್ಜುನ ಧೋತ್ರೆ, ಅಮರನಾಥ ಹಾಲುಬಾಯಿ, ಸದಾನಂದ ಸಿಂಗಾಡೆ, ಮೋಹನ್ ಟೊಣಪೆ, ವಿಶ್ವಮೂರ್ತಿ ಸರೋದೆ ಹಾಗೂ ಗೀತಾ ಗಣೇಶ ಅವರನ್ನು ಗೌರವಿಸಲಾಯಿತು.
ಎಸ್‌ಎಸ್‌ಎಲ್‌ಸಿ, ಪಿಯು ಹಾಗೂ ಪದವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ, ಗೌರವಧನ ನೀಡಿ ಸನ್ಮಾನಿಸಲಾಯಿತು.
ನಂತರ ಕಲಾವಿದ ರತ್ನಾಕರ್ ಬಣಗಾರರ ತಂಡದವರು ದೇವರನಾಮಗಳನ್ನು ಹಾಡಿದರು. ಗಂಗಾವತಿಯ ನರಸಿಂಹ ಜೋಶಿ, ‘ಹಾಸ್ಯ ಲಾಸ್ಯ’ ಕಾರ್ಯಕ್ರಮದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ವೇದಿಕೆಯಲ್ಲಿ ಸ್ವಕುಳಸಾಳಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ ಭಂಡಾರೆ, ಸಂಘದ ಅಧ್ಯಕ್ಷ ಪ್ರದೀಪ ರೋಖಡೆ, ಮಹಿಳಾ ಮಂಡಳಿ ಅಧ್ಯಕ್ಷೆ ಜಲಜಾ ಸವ್ವಾಸೇರೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.