ಬೆಂಗಳೂರು: ಮೆಟ್ರೊದಲ್ಲಿ (ಬಿಎಂಆರ್‌ಸಿಎಲ್) ಕೆಲಸ ಕೊಡಿಸುವುದಾಗಿ ಎಂಜಿನಿಯರಿಂಗ್ ಪದವೀಧರೆಗೆ ₹ 7 ಲಕ್ಷ ವಂಚಿಸಿದ ಕುರಿತು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಡುಗೋಡಿ ನಿವಾಸಿ ಎಸ್.ಭವ್ಯಾ ವಂಚನೆಗೆ ಒಳಗಾದವರು. ಸತೀಶ್ ಎಂ.ಗೌಡ ಮತ್ತು ಮಂಜುನಾಥ್ ವಿರುದ್ಧ ಅವರು ದೂರು ನೀಡಿದ್ದಾರೆ.
ಫೆಬ್ರುವರಿಯಲ್ಲಿ ಮೆಟ್ರೊದಲ್ಲಿ ಉದ್ಯೋಗ ಅವಕಾಶ ಕುರಿತು ವಿಚಾರಿಸಲು ಭವ್ಯಾ ಬೈಯಪ್ಪನಹಳ್ಳಿ ಮೆಟ್ರೊ ಡಿಪೊ ಬಳಿ ಹೋಗಿದ್ದಾಗ ಆರೋಪಿ ಪರಿಚಯವಾಗಿದ್ದ. ದ ಸತೀಶ್ ಎಂ. ಗೌಡ, ‘ನನಗೆ ಮೆಟ್ರೊದಲ್ಲಿ ಹಿರಿಯ ಅಧಿಕಾರಿಗಳ ಪರಿಚಯವಿದೆ. ₹ 7.5 ಲಕ್ಷ ನೀಡಿದರೆ ಸಹಾಯಕ ಎಂಜಿನಿಯರ್ ಹುದ್ದೆ ಕೊಡಿಸುತ್ತೇನೆ’ ಎಂದು ಹೇಳಿದ್ದ. ಮಾತು ನಂಬಿದ ಭವ್ಯಾ ಆತನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದರು. ಆದರೆ, ಬಳಿಕ ಸಬೂಬು ಹೇಳತೊಡಗಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.