ADVERTISEMENT

ವಾಯುವಿಹಾರಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 18 ಮೇ 2020, 20:53 IST
Last Updated 18 ಮೇ 2020, 20:53 IST

ಬೆಂಗಳೂರು: ಲಾಲ್‍ಬಾಗ್ ಹಾಗೂ ಕಬ್ಬನ್ ಉದ್ಯಾನಗಳಲ್ಲಿ ಮೇ 19ರಿಂದ ವಾಯುವಿಹಾರಕ್ಕೆ ಅವಕಾಶ ನೀಡಲಾಗಿದೆ.

'ವಾಯುವಿಹಾರಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಅಂತರ ಕಾಯ್ದುಕೊಳ್ಳಬೇಕು' ಎಂದು ರಾಜ್ಯ ತೋಟಗಾರಿಕೆ ಇಲಾಖೆ ನಿರ್ದೇಶಕ ಬಿ.ವೆಂಕಟೇಶ್ ತಿಳಿಸಿದರು.

22ರಿಂದ ರೇವಾ ಸಿಇಟಿ

ADVERTISEMENT

ಬೆಂಗಳೂರು: ನಗರದ ರೇವಾ ವಿಶ್ವವಿದ್ಯಾಲಯದ ವಿವಿಧ ಕೋರ್ಸ್‌ಗಳ ಪ್ರವೇಶಕ್ಕಾಗಿ ಆನ್‌ಲೈನ್‌ನಲ್ಲಿ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆ (ರೇವಾ ಸಿಇಟಿ) ಇದೇ 22ರಿಂದ ಜೂನ್‌ 12ರವರೆಗೆ ನಡೆಯಲಿದೆ.

ರೇವಾ ಸಿಇಟಿಗೆ ಸಂಬಂಧಿಸಿದಂತೆ ಸಂಶಯಗಳನ್ನು ಬಗೆಹರಿಸುವ ಸಲುವಾಗಿ ಮಂಗಳವಾರ (ಮೇ 19) ವಿಡಿಯೊ ಸಂವಾದ (ವೆಬಿನಾರ್‌) ನಡೆಯಲಿದೆ. ಆನ್‌ಲೈನ್‌ ಪರೀಕ್ಷೆಯನ್ನು ಇನ್ನಷ್ಟು ಸುಲಭಗೊಳಿಸುವ ಸಲುವಾಗಿ ಮಂಗಳವಾರ ಸಂಜೆ 5 ಗಂಟೆಗೆ ಹಾಗೂ ಬುಧವಾರ ಬೆಳಿಗ್ಗೆ 10.30ಕ್ಕೆ ಆನ್‌ಲೈನ್ ಡೆಮೊ ಪರೀಕ್ಷೆ ನಡೆಯಲಿದೆ.

ರೇವಾ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ಗಳಲ್ಲದೆ, ಕಾನೂನು ಹಾಗೂ ಎಂಬಿಎ ಪದವಿಗಳ ವ್ಯಾಸಂಗಕ್ಕೂ ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.