ADVERTISEMENT

ಕೆ.ಶಿವನ್‌ಗೆ ವಿಟಿಯು ಗೌರವ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 20:29 IST
Last Updated 21 ನವೆಂಬರ್ 2020, 20:29 IST
ವಜೂಭಾಯಿ ವಾಲಾ ಅವರು ಕೆ.ಶಿವನ್‌ ಅವರಿಗೆ ‘ಡಾಕ್ಟರ್ ಆಫ್‌ ಸೈನ್ಸ್‌’ ಗೌರವ ಪದವಿ ಪ್ರದಾನ ಮಾಡಿದರು. ಡಾ.ಸಿ.ಎನ್. ಅಶ್ವತ್ಥನಾರಾಯಣ, ವಿಟಿಯು ಕುಲಪತಿ ಪ್ರೊ. ಕರಿಸಿದ್ದಪ್ಪ ಇದ್ದಾರೆ.
ವಜೂಭಾಯಿ ವಾಲಾ ಅವರು ಕೆ.ಶಿವನ್‌ ಅವರಿಗೆ ‘ಡಾಕ್ಟರ್ ಆಫ್‌ ಸೈನ್ಸ್‌’ ಗೌರವ ಪದವಿ ಪ್ರದಾನ ಮಾಡಿದರು. ಡಾ.ಸಿ.ಎನ್. ಅಶ್ವತ್ಥನಾರಾಯಣ, ವಿಟಿಯು ಕುಲಪತಿ ಪ್ರೊ. ಕರಿಸಿದ್ದಪ್ಪ ಇದ್ದಾರೆ.   

ಬೆಂಗಳೂರು: ಇಸ್ರೊ ಅಧ್ಯಕ್ಷ, ಬಾಹ್ಯಾಕಾಶ ವಿಜ್ಞಾನಿ ಕೆ.ಶಿವನ್‌ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಡಾಕ್ಟರ್‌ ಆಫ್‌ ಸೈನ್ಸ್‌ ಗೌರವ ಪದವಿಗೆ ಪಾತ್ರರಾಗಿದ್ದಾರೆ.

ನಗರದ ರಾಜಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಈ ಪದವಿಯನ್ನು ಪ್ರದಾನ ಮಾಡಿದರು.

ಅತ್ಯುತ್ತಮ ವಿಜ್ಞಾನಿಗಳು ಹಾಗೂ ಕೈಗಾರಿಕೋದ್ಯಮಿಗಳನ್ನುಗುರುತಿಸಿ ಈ ಪದವಿಯನ್ನು ನೀಡಲಾಗುತ್ತದೆ. ಶಿವನ್‌ ಅವರು ಬಾಹ್ಯಾಕಾಶ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಈ ಪದವಿ ನೀಡಲಾಯಿತು.

ADVERTISEMENT

‘ಶಿವನ್‌ ಅವರ ನಾಯಕತ್ವದಲ್ಲಿ ಇಸ್ರೊ ಅದ್ಭುತಗಳನ್ನೇ ಸೃಷ್ಟಿಸುತ್ತಿದೆ’ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.