ADVERTISEMENT

ನಾಳೆ ಕಲಾ ಗಂಗೋತ್ರಿ 50ರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 21:34 IST
Last Updated 3 ಸೆಪ್ಟೆಂಬರ್ 2022, 21:34 IST
‘ಮುಖ್ಯಮಂತ್ರಿ’ ಚಂದ್ರು
‘ಮುಖ್ಯಮಂತ್ರಿ’ ಚಂದ್ರು   

ಬೆಂಗಳೂರು: ಕಲಾ ಗಂಗೋತ್ರಿ ರಂಗ ತಂಡವು ಸೆ.5ರಂದು ಸಂಜೆ 4ಗಂಟೆಗೆ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ 50ನೇ ವರ್ಷದ ರಂಗ ಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

‘ಮುಖ್ಯಮಂತ್ರಿ’ ಹಾಗೂ ‘ಮತ್ತೆ ಮುಖ್ಯಮಂತ್ರಿ’ ರಾಜಕೀಯ ನಾಟಕಗಳ ವಿಶ್ಲೇಷಣೆ ರವೀಂದ್ರ ಕಲಾಕ್ಷೇತ್ರದ ಮಹಿಳೆಯರ ವಿಶ್ರಾಂತಿ ಕೊಠಡಿಯಲ್ಲಿ ಸಂಜೆ 4ರಿಂದ 5.30ರವರೆಗೆ ನಡೆಯಲಿದೆ. ಸಂಜೆ 6ರಿಂದ ‘ಮುಖ್ಯಮಂತ್ರಿ’ ಚಂದ್ರು ಅವರು ರಚಿಸಿದ ಅವರ ಜೀವನ ಪಯಣದ ಕೃತಿ ‘ರಂಗವನದ ಚಂದ್ರತಾರೆ’ ಬಿಡುಗಡೆಯಾಗಲಿದೆ.

ಸಂಜೆ 7 ಗಂಟೆಗೆ ‘ಮತ್ತೆ ಮುಖ್ಯಮಂತ್ರಿ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಕೆ.ವೈ. ನಾರಾಯಣಸ್ವಾಮಿ ರಚಿಸಿದ್ದು, ಬಿ.ವಿ. ರಾಜಾರಾಂ ನಿರ್ದೇಶಿಸಿದ್ದಾರೆ. ಪ್ರಧಾನ ಪಾತ್ರದಲ್ಲಿ ‘ಮುಖ್ಯಮಂತ್ರಿ’ ಚಂದ್ರು ಕಾಣಿಸಿಕೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.