ಸಿದ್ದರಾಮಯ್ಯ
ಬೆಂಗಳೂರು: ‘ಮುಂಬರುವ ಬಜೆಟ್‌ನಲ್ಲಿ ಸಾರ್ವಜನಿಕ ಗ್ರಂಥಾಲಯದ ಸಗಟು ಕನ್ನಡ ಪುಸ್ತಕ ಖರೀದಿ ಯೋಜನೆ ಜಾರಿಗೆ ₹25 ಕೋಟಿ ಮೀಸಲಿಡಬೇಕು’ ಎಂದು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.
‘2023–24ನೇ ಸಾಲಿನಲ್ಲಿ ಈ ಯೋಜನೆಗೆ ಅನುದಾನ ಮೀಸಲಿಡುವಂತೆ ಕೋರಿದಾಗ ₹10 ಕೋಟಿ ಘೋಷಣೆ ಮಾಡಿದ್ದೀರಿ. ಪುಸ್ತಕ ಸಗಟು ಖರೀದಿ ಯೋಜನೆಯಡಿ ಆಯ್ಕೆಯಾದ ಪುಸ್ತಕಗಳ 300 ಪ್ರತಿ ಖರೀದಿಸಿ ಜಿಲ್ಲಾ, ನಗರ ಕೇಂದ್ರ ಗ್ರಂಥಾಲಯಗಳಿಗೆ ವಿತರಿಸುವ ಯೋಜನೆ ಜಾರಿಯಲ್ಲಿದೆ. ಆದರೆ, ತಮಿಳುನಾಡಿನಲ್ಲಿ 500, ಕೇರಳದಲ್ಲಿ 1,000 ಪ್ರತಿ ಖರೀದಿಸಿ ಸರ್ಕಾರವೇ ಪುಸ್ತಕ ಪ್ರದರ್ಶನ ಏರ್ಪಡಿಸುತ್ತಿದೆ. ನಮ್ಮಲ್ಲೂ ಈ ಯೋಜನೆಗೆ ಹೆಚ್ಚಿನ ಒತ್ತು ಸಿಗಬೇಕು’ ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ಕಾರ್ಯದರ್ಶಿ ಆರ್.ದೊಡ್ಡೇಗೌಡ ಕೋರಿದ್ದಾರೆ.
ಆದೇಶ ಅಮಾನತ್ತಿನಲ್ಲಿಡಿ: ‘ಗ್ರಂಥಾಲಯಗಳಿಗೆ ಕನ್ನಡ ಸಾಹಿತ್ಯ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳ ಖರೀದಿ ಪ್ರಮಾಣವನ್ನು ಇಳಿಕೆ ಮಾಡಿರುವ ಆದೇಶವನ್ನು ಅಮಾನತ್ತಿನಲ್ಲಿಡಬೇಕು. ಆರ್ಥಿಕ ವರ್ಷ ಮುಗಿಯಲು ಕೆಲವೇ ದಿನ ಇರುವಾಗ ಇಂತಹ ತಿದ್ದುಪಡಿ ಆದೇಶ ಹೊರಡಿಸಿರುವುದು ಸರಿಯಲ್ಲ. ಹಿಂದಿನ ಆದೇಶದಂತೆಯೇ ಪುಸ್ತಕ ಖರೀದಿಗೆ ಅವಕಾಶ ನೀಡಿ ಲೇಖಕರು, ಪ್ರಕಾಶಕರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು’ ಎಂದು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.