ADVERTISEMENT

ರಾಜ್ಯೋತ್ಸವದ ವೇಳೆಗೆ ಆನ್‌ಲೈನ್ ಪರೀಕ್ಷೆಗೆ ಚಾಲನೆ: ಟಿ.ಎಸ್. ನಾಗಾಭರಣ

ಕನ್ನಡ ಅಭಿವೃದ್ಧಿ ಪ್ರಾಧಿಕಾರ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 22:28 IST
Last Updated 11 ಆಗಸ್ಟ್ 2020, 22:28 IST
ಟಿ.ಎಸ್.ನಾಗಾಭರಣ
ಟಿ.ಎಸ್.ನಾಗಾಭರಣ   

ಬೆಂಗಳೂರು: ‘ರಾಜ್ಯೋತ್ಸವದ ವೇಳೆಗೆ ಕನ್ನಡ ಭಾಷಾ ಕೌಶಲ ಆನ್‍ಲೈನ್ ಪರೀಕ್ಷೆಯ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ,ನಿಗದಿತ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ತಿಳಿಸಿದರು.

ಕನ್ನಡ ಭಾಷಾ ಕೌಶಲ ಆನ್‍ಲೈನ್ ಪರೀಕ್ಷೆ ಯೋಜನೆ ಕುರಿತು ಪ್ರಾಧಿಕಾರವು ತಜ್ಞರೊಂದಿಗೆ ಮಂಗಳವಾರ ಆಯೋಜಿಸಿದ್ದ ಆನ್‍ಲೈನ್ ಸಭೆಯಲ್ಲಿ ಮಾತನಾಡಿದ ಅವರು, ‘ಈ ತಂತ್ರಾಂಶದ ಅಭಿವೃದ್ಧಿಯಿಂದ ಅನಿವಾಸಿ ಕನ್ನಡಿಗರಿಗೂ ಹೆಚ್ಚಿನ ಅನುಕೂಲವಾಗಲಿದೆ. ಉನ್ನತ ಮಟ್ಟದ ಅಧಿಕಾರಿಗಳಿಂದ ಕೆಳಹಂತದ ನೌಕರರು ಸೇರಿದಂತೆ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಕಲಿಯಬೇಕು ಎನ್ನುವುದು ಆಶಯ.ಪರೀಕ್ಷೆ ಪಾಸು ಮಾಡುವವರಿಗೆ ಪ್ರಮಾಣ ಪತ್ರ ನೀಡಲಾಗುವುದು. ಉದ್ಯೋಗ ಪಡೆಯುವ ಸಂದರ್ಭದಲ್ಲಿ ಕೂಡ ಈ ಪ್ರಮಾಣಪತ್ರ ಸಹಕಾರಿಯಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT