ಬೆಂಗಳೂರು: ‘ಕಾಲದಿಂದ ಕಾಲಕ್ಕೆ ಕನ್ನಡ ಚಿಂತನ ಕ್ರಮ ಬದಲಾಗುತ್ತಿದೆ. ಕನ್ನಡ ಭಾಷೆ ನಿಂತ ನೀರಾಗಿರದೆ, ಸದಾ ಹರಿಯುತ್ತಿದೆ’ ಎಂದು ಹೈದರಾಬಾದ್‌ನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿ.ಬಿ. ತಾರಕೇಶ್ವರ್ ಅಭಿಪ್ರಾಯಪಟ್ಟರು.
ಬುಕ್ ಬ್ರಹ್ಮ ಸಾಹಿತ್ಯ ಉತ್ಸವದ ‘ಕನ್ನಡದ್ದೇ ಚಿಂತನ ಕ್ರಮ ಇದೆಯೇ?’ ಗೋಷ್ಠಿಯಲ್ಲಿ ಮಾತನಾಡಿ, ‘ಭಾಷೆಯ ಆಧಾರದ ಮೇಲೆಯೇ ನಮ್ಮ ಸಂಸ್ಕೃತಿ ರೂಪುಗೊಂಡಿದೆ. ಎಲ್ಲ ಭಾರತೀಯ ಭಾಷೆಗಳಿಗೆ ತನ್ನದೇ ಆದ ಚಿಂತನ ಕ್ರಮವಿದೆ. ಚಿಂತನ ಕ್ರಮವನ್ನು ಭಾಷೆಯ ಆಧಾರದ ಮೇಲೆ ವಿಂಗಡಿಸುತ್ತೇವೆ. ಕನ್ನಡ ಭಾಷೆ ತನ್ನ ಆಯಾಮಕ್ಕೆ ತಕ್ಕಂತೆ ಬದಲಾಗುವುದರ ಜೊತೆಗೆ, ಹಲವು ಭಾಷೆಯ ಸಂಸ್ಕೃತಿ, ಪರಿಕರಗಳನ್ನು ಅನುಸರಿಸುತ್ತದೆ’ ಎಂದು ಹೇಳಿದರು.
‘ಯಾವುದೇ ಒಂದು ಚಿಂತನೆಯು ಕನ್ನಡಕ್ಕೆ ಮಾತ್ರ ಸೀಮಿತವಾದ ಚಿಂತನೆ
ಯೆಂದು ಎನ್ನಲಾಗದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.