ADVERTISEMENT

ಶೈಲಜಾಗೆ ‘ಟಿ.ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 14:36 IST
Last Updated 22 ಸೆಪ್ಟೆಂಬರ್ 2025, 14:36 IST
 ಬಿ.ಎಸ್.ಶೈಲಜಾ
 ಬಿ.ಎಸ್.ಶೈಲಜಾ   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ‘ಟಿ.ಗಿರಿಜಾ ಸಾಹಿತ್ಯ ದತ್ತಿ  ಪ್ರಶಸ್ತಿ’ಗೆ ಜವಾಹರ್‌ಲಾಲ್ ನೆಹರೂ ತಾರಾಲಯದ ನಿವೃತ್ತ ನಿರ್ದೇಶಕರೂ ಆಗಿರುವ ವಿಜ್ಞಾನ ಬರಹಗಾರ್ತಿ ಬಿ.ಎಸ್.ಶೈಲಜಾ ಆಯ್ಕೆಯಾಗಿದ್ದಾರೆ.

ಕಸಾಪ ಅಧ್ಯಕ್ಷ ಮಹೇಶ ಜೋಶಿ ನೇತೃತ್ವದ ಸಮಿತಿ ಈ ಆಯ್ಕೆ ಮಾಡಿದೆ. ಪ್ರಶಸ್ತಿಯು ₹15 ಸಾವಿರ ನಗದು ಒಳಗೊಂಡಿದೆ. ಲೇಖಕಿ ಟಿ.ಗಿರಿಜಾ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಲೇಖಕಿಯರಿಗೆ ಪ್ರತಿ ವರ್ಷ ನೀಡಲಾಗುತ್ತಿದೆ.

ಬಿ.ಎಸ್.ಶೈಲಜಾ ಅವರು ಕನ್ನಡದಲ್ಲಿ ವಿಜ್ಞಾನವನ್ನು, ಅದರಲ್ಲಿಯೂ ಖಭೌತ ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ. ಕನ್ನಡದಲ್ಲಿ 600 ಮತ್ತು ಇಂಗ್ಲಿಷ್‌ನಲ್ಲಿ 200ಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಅವರು, 150 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ‘ಖಗೋಳ ದರ್ಶನ’ ಬೃಹತ್ ಸಂಪುಟವನ್ನು ಕನ್ನಡಕ್ಕೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.