ADVERTISEMENT

ಕ್ರೈಸ್ತ ಸಂಸ್ಥೆಗಳಿಂದ ಗುಣಮಟ್ಟದ ಶಿಕ್ಷಣ: ಸಾಹಿತಿ ಹಂ.ಪ.ನಾಗರಾಜಯ್ಯ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 7:24 IST
Last Updated 21 ಮಾರ್ಚ್ 2023, 7:24 IST
ನುಡಿನಮನ ಕಾರ್ಯಕ್ರಮದಲ್ಲಿ ಫಾದರ್‌ ಐ.ಚಿನ್ನಪ್ಪ ಅವರ ಭಾವಚಿತ್ರಕ್ಕೆ ಸಾಹಿತಿ ಹಂ.ಪ. ನಾಗರಾಜಯ್ಯ ಅವರು ಪುಷ್ಪನಮನ ಸಲ್ಲಿಸಿದರು
ನುಡಿನಮನ ಕಾರ್ಯಕ್ರಮದಲ್ಲಿ ಫಾದರ್‌ ಐ.ಚಿನ್ನಪ್ಪ ಅವರ ಭಾವಚಿತ್ರಕ್ಕೆ ಸಾಹಿತಿ ಹಂ.ಪ. ನಾಗರಾಜಯ್ಯ ಅವರು ಪುಷ್ಪನಮನ ಸಲ್ಲಿಸಿದರು   

ಬೆಂಗಳೂರು: ‘ಕೆಲವು ವರ್ಗದವರು ವಿದ್ಯಾಭ್ಯಾಸದಿಂದ ವಂಚಿತರಾದಾಗ ಅವರಿಗೆ ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣವನ್ನು ಕಲ್ಪಿಸಿ ಹಲವು ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗೇರಲು ಕಾರಣವಾದವು’ ಎಂದು ಸಾಹಿತಿ ಹಂ.ಪ.ನಾಗರಾಜಯ್ಯ ಹೇಳಿದರು.

ಕನ್ನಡ ಕ್ರೈಸ್ತ ಧರ್ಮ ಗುರುಗಳ ಬಳಗ, ಅಖಲಿ ಕರ್ನಾಟಕ ಕಾಥೋಲಿಕ್‌ ಕ್ರೈಸ್ತರ ಕನ್ನಡ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಫಾದರ್‌ ಐ. ಚಿನ್ನಪ್ಪ ನುಡಿನಮನ ಕಾರ್ಯಕ್ರಮದಲ್ಲಿ ಹಂ.ಪ.ನಾಗರಾಜಯ್ಯ ಅವರು ಮಾತನಾಡಿದರು.

‘ಚಿನ್ನಪ್ಪ ಅವರು ಶಿಕ್ಷಣದ ಜತೆಗೆ ವಿವೇಕವನ್ನೂ ಕಲಿಸಿದ್ದರು. ಅವರ ಮಾತಿನಲ್ಲಿ ನಾವೆಲ್ಲರೂ ಸತ್ಯವನ್ನು ಕಾಣುತ್ತಿದ್ದೆವು. ಕನ್ನಡ, ಇಂಗ್ಲಿಷ್‌, ಸಂಸ್ಕೃತ ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ಪಾಂಡಿತ್ಯ ಹೊಂದಿದ್ದರು. ಮುಕ್ತವಾಗಿ ಬೆರೆಯುತ್ತಿದ್ದರು. ಹಲವು ವಿಚಾರಗಳ ಚರ್ಚೆ ನಡೆಸುತ್ತಿದ್ದರು’ ಎಂದು ಹೇಳಿದರು.

ADVERTISEMENT

ಶಾಸಕ ಉದಯ ಗರುಡಾಚಾರ್‌ ಮಾತನಾಡಿ, ದೇಶದಲ್ಲಿ ಕ್ರೈಸ್ತ ಧರ್ಮಿಯರೂ ಕಡಿಮೆ ಸಂಖ್ಯೆಯಲ್ಲಿದ್ದರೂ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ರಫಾಯಲ್‌ ರಾಜ್‌, ಫಾದರ್ ಸಿ. ಫ್ರಾನ್ಸಿಸ್‌, ಕನ್ನಡ ಕ್ರೈಸ್ತ ಧರ್ಮಗಳ ಬಳಗ ಅಧ್ಯಕ್ಷ ಫಾ.ಅ.ಥೋಮಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.