ADVERTISEMENT

‘ಪುಸ್ತಕ ಖರೀದಿ ಸಂಖ್ಯೆ ಹೆಚ್ಚಿಸಬೇಕು’

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 19:06 IST
Last Updated 25 ಜುಲೈ 2019, 19:06 IST
ಪ್ರೊ.ಎಂ.ಎಚ್. ಕೃಷ್ಣಯ್ಯ ಹಾಗೂ ಡಾ. ವಸುಂಧರಾ ಭೂಪತಿ ಚರ್ಚಿಸಿದರು. ಲೇಖಕ ಜಿ. ಅಶ್ವಥನಾರಾಯಣ, ನಿಡಸಾಲೆ ಪುಟ್ಟಸ್ವಾಮಯ್ಯ ಮತ್ತು ಕೆ. ರಾಜಕುಮಾರ್ ಇದ್ದಾರೆ     –ಪ್ರಜಾವಾಣಿ ಚಿತ್ರ
ಪ್ರೊ.ಎಂ.ಎಚ್. ಕೃಷ್ಣಯ್ಯ ಹಾಗೂ ಡಾ. ವಸುಂಧರಾ ಭೂಪತಿ ಚರ್ಚಿಸಿದರು. ಲೇಖಕ ಜಿ. ಅಶ್ವಥನಾರಾಯಣ, ನಿಡಸಾಲೆ ಪುಟ್ಟಸ್ವಾಮಯ್ಯ ಮತ್ತು ಕೆ. ರಾಜಕುಮಾರ್ ಇದ್ದಾರೆ     –ಪ್ರಜಾವಾಣಿ ಚಿತ್ರ   

ಬೆಂಗಳೂರು:‌ ‘ಪ್ರಕಾಶನಗಳಿಂದ ಗ್ರಂಥಾಲಯಗಳು ಖರೀದಿ ಮಾಡುವ ಪುಸ್ತಕಗಳಸಂಖ್ಯೆಯನ್ನು 300ರಿಂದ 500ಕ್ಕೆ ಹೆಚ್ಚಿಸಬೇಕು’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರ ಗುರುವಾರ ಆಯೋಜಿಸಿದ್ದ ‘ಮುದ್ರಣದ ವಿವಿಧ ಆಯಾಮಗಳು ಒಂದು ಚರ್ಚೆ’ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

‘ತಮಿಳುನಾಡು ಮತ್ತು ಕೇರಳದಲ್ಲಿ ಗ್ರಂಥಾಲಯಗಳಿಗಾಗಿ 1 ಸಾವಿರ ಪುಸ್ತಕಗಳ ಖರೀದಿ ನಡೆಯುತ್ತಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ಕನಿಷ್ಠ 500 ಅಥವಾ ₹3 ಲಕ್ಷ ಮೊತ್ತದ ಪುಸ್ತಕ ಖರೀದಿ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸಾಹಿತಿ ಪ್ರೊ.ಎಂ.ಎಚ್. ಕೃಷ್ಣಯ್ಯ, 'ಪುಸ್ತಕಗಳ ಮುದ್ರಣ ಅಚ್ಚು ಮೊಳೆಯಿಂದ ಡಿಜಿಟಲ್ ತನಕ ಬೆಳೆದಿದೆ. ನಾವು ಮಾತನಾಡಿದ್ದನ್ನು ಅಕ್ಷರವಾಗಿ ಪರಿವರ್ತಿಸುವ ಆ್ಯಪ್‌ಗಳು ಕೂಡ ಇವೆ. ತಂತ್ರಜ್ಞಾನ ಮುಂದುವರಿದಂತೆ ಕರಡು ತಿದ್ದುವಂತಹ ಆ್ಯಪ್‌ಗಳನ್ನೂ ಅಭಿವೃದ್ಧಿಪಡಿಸುವುದು ಸೂಕ್ತ’ ಎಂದರು.

ಕರ್ನಾಟಕ ಬರಹಗಾರರು ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ‘ಗ್ರಂಥಾಲಯಗಳನ್ನು ಬಿಬಿಎಂಪಿ ಸುಪರ್ದಿಗೆ ನೀಡುವ ಪ್ರಸ್ತಾವ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಮುಂದಿದೆ. ಅದಕ್ಕೆ ಒಪ್ಪಿಗೆ ನೀಡದಂತೆ ಒತ್ತಡ ಹೇರಬೇಕಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ನೇತೃತ್ವ ವಹಿಸಿ ಹೋರಾಟ ನಡೆಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.