ADVERTISEMENT

‘ಅನ್ಯಭಾಷಿಕರಿಗೆ ಕನ್ನಡ ಕಲಿಸಿ’

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 21:34 IST
Last Updated 14 ನವೆಂಬರ್ 2020, 21:34 IST
ಕೆ.ಆರ್.ಪುರ ಸಬ್‌ ಇನ್‌ಸ್ಪೆಕ್ಟರ್‌ ಮಂಜುನಾಥ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಉದಯಕುಮಾರ್, ಬಾಬುರೆಡ್ಡಿ, ರಾಜಕುಮಾರ್, ಡಿ.ಕೆ.ಆಶೋಕೇಶವ್ ಇದ್ದರು
ಕೆ.ಆರ್.ಪುರ ಸಬ್‌ ಇನ್‌ಸ್ಪೆಕ್ಟರ್‌ ಮಂಜುನಾಥ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಉದಯಕುಮಾರ್, ಬಾಬುರೆಡ್ಡಿ, ರಾಜಕುಮಾರ್, ಡಿ.ಕೆ.ಆಶೋಕೇಶವ್ ಇದ್ದರು   

ಕೆ.ಆರ್.ಪುರ: ‘ರಾಜ್ಯದಲ್ಲಿ ವಲಸಿಗರು ಬಂದು ನೆಲಸಿದ್ದಾರೆ. ಅನ್ಯಭಾಷಿಕರ ಪ್ರಾಬಲ್ಯದ ಮಧ್ಯೆ ಕನ್ನಡ ಮಾತನಾಡುವವರೇ ಕಡಿಮೆ ಆಗಿದ್ದಾರೆ. ಅನ್ಯಭಾಷಿಕರೊಂದಿಗೆ ಅವರ ಭಾಷೆಯಲ್ಲಿ ಮಾತನಾಡದೇ ಕನ್ನಡದಲ್ಲಿ ಮಾತನಾಡಬೇಕು. ಅವರಿಗೂ ಕನ್ನಡ ಕಲಿಸಬೇಕು’ ಎಂದು ಸಬ್ ಇನ್‌ಸ್ಪೆಕ್ಟರ್‌ ಮಂಜುನಾಥ ತಿಳಿಸಿದರು.

ಬಸವನಪುರ ವಾರ್ಡಿನ ಪ್ರಿಯಾಂಕನಗರದಲ್ಲಿ ಕರ್ನಾಟಕ ಜನಾಭಿವೃದ್ಧಿ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ
ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.

ಕರ್ನಾಟಕ ಜನಾಭಿವೃದ್ದಿ ರಕ್ಷಣಾ ವೇದಿಕೆಯ ಕೆ.ಆರ್. ಪುರ ಘಟಕದ ಅಧ್ಯಕ್ಷ ಡಿ.ಕೆ. ಆಶೋಕೇಶವ್, ‘ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾಷೆ ಕನ್ನಡ. ನಮ್ಮ ಭಾಷೆಯ ಪರಂಪರೆಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಟೊಂಕಕಟ್ಟಿ ದುಡಿಯಬೇಕು’ ಎಂದರು.

ADVERTISEMENT

ಭುವನೇಶ್ವರಿ ದೇವಿಯ ಮೆರವಣಿಗೆಯಲ್ಲಿ ಮಹಿಳೆಯರು ಕಳಸ ಹೊತ್ತು ಸಾಗಿದರು. ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ಜನರ‌ ಮನಸೂರೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.