ADVERTISEMENT

ಕನ್ನಡಿಗರ ಮನೆ ನೆಲಸಮ: ನೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 19:15 IST
Last Updated 3 ಏಪ್ರಿಲ್ 2021, 19:15 IST

ಬೆಂಗಳೂರು: ‘ಗೋವಾದ ವಾಸ್ಕೋ ಬೈನಾ ಬೀಚ್‌ ತಟದಲ್ಲಿ ತಲೆಮಾರುಗಳಿಂದ ವಾಸವಿದ್ದಕನ್ನಡಿಗರ ಮನೆಗಳನ್ನು ಗೋವಾ ಸರ್ಕಾರ ರಾತ್ರೋರಾತ್ರಿ ನೆಲಸಮ ಮಾಡಿದ್ದು, ಅವರ ರಕ್ಷಣೆಗೆ ರಾಜ್ಯ ಸರ್ಕಾರ ಧಾವಿಸಬೇಕು’ ಎಂದು ಕರ್ನಾಟಕ ಗಡಿ ಹೋರಾಟ ಸಮಿತಿ ಮನವಿ ಮಾಡಿದೆ.

ಈ ಸಂಬಂಧ ಸಮಿತಿಯ ಅಧ್ಯಕ್ಷ ಬಿ.ಕೆ.ರಾ.ರಾವ್ ಬೈಂದೂರು ಅವರ ನಿಯೋಗ ಸಚಿವ ಜಗದೀಶ್ ಶೆಟ್ಟರ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

‘ಕನ್ನಡಿಗರನ್ನು ನಿರಾಶ್ರಿತರನ್ನಾಗಿ ಮಾಡಲು ಹಲವು ವರ್ಷಗಳಿಂದ ಅಲ್ಲಿನ ಸರ್ಕಾರ ಸಂಚು ರೂಪಿಸಿತ್ತು. ಈಗ ರಾತ್ರೋರಾತ್ರಿ ಕನ್ನಡಿಗರ ಮನೆಗಳನ್ನು ನೆಲಸಮ ಮಾಡಿದೆ. ಇವರ ಪರವಾಗಿ ಸಮಿತಿ ಬೆಂಬಲವಾಗಿ ನಿಂತಿದೆ. ರಾಜ್ಯ ಸರ್ಕಾರ ನಿರಾಶ್ರಿತ ಕನ್ನಡಿಗರ ನೆರವಿಗೆ ಧಾವಿಸಬೇಕು’ ಎಂದೂರಾವ್ ಬೈಂದೂರು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.