ADVERTISEMENT

ಯಲಹಂಕ: ಕಣ್ವ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 20:15 IST
Last Updated 10 ಸೆಪ್ಟೆಂಬರ್ 2019, 20:15 IST
ವಿದ್ಯಾವಾರಿಧಿತೀರ್ಥರು ವಿಶೇಷ ಸಾಧನೆ ಮಾಡಿರುವ ಗಣ್ಯರಿಗೆ ‘ಕಣ್ವ ಪ್ರಶಸ್ತಿ ಪ್ರದಾನ’ ಮಾಡಿದರು.
ವಿದ್ಯಾವಾರಿಧಿತೀರ್ಥರು ವಿಶೇಷ ಸಾಧನೆ ಮಾಡಿರುವ ಗಣ್ಯರಿಗೆ ‘ಕಣ್ವ ಪ್ರಶಸ್ತಿ ಪ್ರದಾನ’ ಮಾಡಿದರು.   

ಯಲಹಂಕ: ಸಮಾಜದಲ್ಲಿ ಭಿನ್ನಭಿನ್ನವಾದ ವಿಚಾರಗಳನ್ನು ಹೊಂದಿರುವ ಮನುಷ್ಯರಿದ್ದರೂ ಭೇದಭಾವವನ್ನು ಹೋಗಲಾಡಿಸಿ ಎಲ್ಲರ ಮನಸುಗಳನ್ನು ಒಗ್ಗೂಡಿಸುವವರೇ ನಿಜವಾದ ಮಹಾಗುರುಗಳು ಎಂದು ವಿದ್ಯಾವಾರಿಧಿ ತೀರ್ಥರು ಅಭಿಪ್ರಾಯಪಟ್ಟರು.

ಕಣ್ವ ಮಠದಲ್ಲಿ ಪಂಚಮ ಚಾತುರ್ಮಾಸ್ಯ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವ ಗಣ್ಯರಿಗೆ ‘ಕಣ್ವ ಪ್ರಶಸ್ತಿ ಪ್ರದಾನ’ ಸಮಾರಂಭದಲ್ಲಿ ಮಾತನಾಡಿದ ಅವರು, ’ನಮ್ಮ ಪರಂಪರೆ, ಧರ್ಮ ಮತ್ತು ಗ್ರಂಥಗಳನ್ನು ಅನುಸರಿಸುವುದರ ಜೊತೆಗೆ ವಿವಿಧ ಸಂಪ್ರದಾಯಗಳನ್ನು ಆಚರಿಸುವವರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು’ ಎಂದು ಹೇಳಿದರು.

ಜಾತಿ ಮತ್ತು ಧರ್ಮಕ್ಕಿಂತ ದೇಶ ಮುಖ್ಯ. ನಾವೆಲ್ಲರೂ ಜಾತಿ, ಮತ ಸಂಪ್ರದಾಯಗಳನ್ನು ಬಿಟ್ಟು ದೇಶವನ್ನು ಕಾಯುವ ಯೋಧರಿಗೆ ಸಹಕಾರ ನೀಡಿ ಸದಾ ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಬೇಕು. ಚಾತುರ್ಮಾಸ್ಯ ಸಂಕಲ್ಪ ವ್ರತ ಅನುಷ್ಠಾನದ ಫಲವನ್ನು ಅವರಿಗೆ ಸಮರ್ಪಣೆ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ADVERTISEMENT

ಈ ಸಂದರ್ಭದಲ್ಲಿ ಲೇಖಕ ನರಸಿಂಹನ್ ರಚಿಸಿರುವ ‘ಯಲಹಂಕ ನಾಡು ಇತಿಹಾಸದ ನೋಟಗಳು’ ಕೃತಿಯನ್ನು ಬಿಡುಗಡೆ ಮಾಡಿದರು. ಕಣ್ವಮಠಕ್ಕೆ ಭೂದಾನ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.