ADVERTISEMENT

ಯಲಹಂಕ: ಕರಗದ ಪ್ರತಿಮೆ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 21:20 IST
Last Updated 21 ಫೆಬ್ರುವರಿ 2026, 21:20 IST
ಆದಿಶಕ್ತಿ ದ್ರೌಪದಿ ಅಮ್ಮನವರ 25 ಅಡಿ ಎತ್ತರದ ಕರಗ ಪ್ರತಿಮೆ
ಆದಿಶಕ್ತಿ ದ್ರೌಪದಿ ಅಮ್ಮನವರ 25 ಅಡಿ ಎತ್ತರದ ಕರಗ ಪ್ರತಿಮೆ   

ಯಲಹಂಕ: ಅಮಾನಿ ಕೆರೆಯ ಹಸಿ ಕರಗ ಮಂಟಪದ ಆವರಣದಲ್ಲಿ ವಹ್ನಿಕುಲ ಕ್ಷತ್ರಿಯ ಕುಲದ ಆರಾಧ್ಯ ದೇವತೆ ಆದಿಶಕ್ತಿ ದ್ರೌಪದಿ ಅಮ್ಮನವರ 25 ಅಡಿಗಳ ಎತ್ತರದ ಕರಗ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಯಿತು.

ವಿವಿಧ ಪೂಜಾ ಕೈಂಕರ್ಯಗಳು, ಹೋಮ–ಹವನಗಳು ನೆರವೇರಿದವು. ಮಹಿಳೆಯರು ಕಳಶಗಳನ್ನು ಹೊತ್ತು ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿ, ಬಳಿಕ ದ್ರೌಪದಿ ಅಮ್ಮನವರ ಪ್ರತಿಮೆಯ ಸುತ್ತ ಪ್ರದಕ್ಷಿಣೆ ಹಾಕಿದರು. ನಂತರ, ನೂತನ ವಿಗ್ರಹಕ್ಕೆ ಕುಂಭಾಭಿಷೇಕ ನೆರವೇರಿಸಲಾಯಿತು.

ಶಾಸಕ ಎಸ್‌.ಆರ್‌. ವಿಶ್ವನಾಥ್‌ ಅವರು ಪ್ರತಿಮೆಯನ್ನು ಅನಾವರಣಗೊಳಿಸಿದರು. ದ್ರೌಪದಿ ಆದಿಶಕ್ತಿ ಮಹಾಸಂಸ್ಥಾನ ಪೀಠದ ಬಾಲಯೋಗಿ ಸಾಯಿ ಮಂಜುನಾಥ ಮಹಾರಾಜ್‌ ಸ್ವಾಮೀಜಿ, ಆದಿಶಕ್ತಿ ಮಹಾಸಂಸ್ಥಾನ ಮಠದ ಪ್ರಣವಾನಂದ ಪುರಿ ಸ್ವಾಮೀಜಿ, ಕರ್ನಾಟಕ ರಾಜ್ಯ ತಿಗಳರ (ವಹ್ನಿಕುಲ ಕ್ಷತ್ರಿಯ) ಸಂಘದ ರಾಜ್ಯ ಘಟಕದ ಅಧ್ಯಕ್ಷ ಮು.ಕೃಷ್ಣಮೂರ್ತಿ, ಕರ್ನಾಟಕ ರಾಜ್ಯ ತಿಗಳ ಮಹಾಸಭಾ ಅಧ್ಯಕ್ಷ ಎಚ್‌.ಸುಬ್ಬಣ್ಣ, ಕೆ.ಎಸ್‌.ಟಿ.ಐ.ಡಿ.ಸಿ. ಉಪಾಧ್ಯಕ್ಷ ಜಿ.ವಿ.ಬಾಲಾಜಿ, ಸಂಘದ ಮಾಜಿ ಅಧ್ಯಕ್ಷ ಸಿ.ಜಯರಾಜ್‌, ಖಜಾಂಚಿ ಹೂಡಿ ವಿಜಯಕುಮಾರ್‌, ನಿರ್ದೇಶಕ ನಾಗಾರ್ಜುನ ಉಪಸ್ಥಿತರಿದ್ದರು.

ADVERTISEMENT

ರಸಸಂಜೆ ಕಾರ್ಯಕ್ರಮ, ದ್ರೌಪದಿ ಅಮ್ಮನವರ ಕರಗದ ನಾಟಕ, ಕಾಂತಾರ ಮತ್ತು ಗುಳಿಗ್ಗ, ಭದ್ರಕಾಳಿ, ನವಶಕ್ತಿ ವೈಭವ, ಕಾಳಿ ಹಾಗೂ ಅಗೋರಿ ನೃತ್ಯಗಳ ಪ್ರದರ್ಶನಗಳು ಜನರ ಗಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.