ADVERTISEMENT

ಕರ್ನಾಟಕ ಬಂದ್: ವಿಮಾನ ನಿಲ್ದಾಣಕ್ಕೆ ಬೆಳಗ್ಗೆಯೇ ಬಂದ ಪ್ರಯಾಣಿಕರು

ಪ್ರಯಾಣಿಕರಿಂದ ತುಂಬಿ ಹೋದ ವಿಮಾನ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 8:15 IST
Last Updated 22 ಮಾರ್ಚ್ 2025, 8:15 IST
   

ದೇವನಹಳ್ಳಿ: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕ್ಯಾಬ್ ಸೇವೆ ಇರಲಾರದು ಎಂದು ಪ್ರಯಾಣಿಕರು ಬೆಳಗ್ಗೆ 11ರ ನಂತರ ಹಾಗೂ ಮಧ್ಯಾಹ್ನ ವಿಮಾನಗಳಿಗೆ ತೆರಳಲು ಬೆಳಗ್ಗೆ 8 ಗಂಟೆಗೆ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು.

ಇದರಿಂದ ವಿಮಾನ ನಿಲ್ದಾಣ ಪ್ರಯಾಣಿಕರಿಂದ ತುಂಬಿತು.

ಓಲಾ, ಉಬರ್ ಟ್ಯಾಕ್ಸಿಗಳು ಬೆಳಗ್ಗೆ 8ರ ಬಳಿಕ‌ ಇರುವುದಿಲ್ಲ ಎಂದು ಜನರು ಬೆಳಗ್ಗೆ ಟ್ಯಾಕ್ಸಿ ಬುಕ್ ಮಾಡಿಕೊಂಡು ವಿಮಾನ ನಿಲ್ದಾಣಕ್ಕೆ ಬಂದಿದ್ದರು.

ADVERTISEMENT

ಮುಂಜಾನೆಯಿಂದ ವಿಮಾನ ನಿಲ್ದಾಣದ ಡ್ರಾಪ್ ಪಾಯಿಂಟ್‌ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.

ಎರಡು ಟರ್ಮಿನಲ್ ಮಳಿಗೆಗಳ ಮುಂದೆ ಜನರ ದಂಡೇ ನೆರದಿತ್ತು. ಲಗೇಜ್ ಸಮೇತ ಕುಳಿತಿದ್ದ ಜನರು ಕಾಲಹರಣ ಮಾಡಲು ಪ್ರಯಾಸ ಪಡುತ್ತಿದ್ದರು. ಕೆಲವರು ಕುಳಿತಲ್ಲೇ ನಿದ್ರೆಗೆ ಜಾರಿದ್ದರು.

ಬೆಳಗ್ಗೆ 10ರ ಬಳಿಕ ಪಿಕಪ್ ಪಾಯಿಂಟ್ ನಲ್ಲಿ ಟ್ಯಾಕ್ಸಿಗಳು ಸಂಖ್ಯೆ ವಿರಳವಾಗಿತ್ತು.

ಎಂದಿನಂತೆ ಬಿಎಂಟಿಸಿ ವಾಯುವಜ್ರ ಬಸ್ ಗಳು ಸಂಚರಿಸಿದವು. ಪ್ರಯಾಣಿಕರಿಲ್ಲದೆ ಖಾಲಿ ಓಡಾಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.