ADVERTISEMENT

ಕಾರ್ಮಿಕ ಕಲ್ಯಾಣ ನಿಧಿ ವಂತಿಗೆ ಪಾವತಿ ಜ.15 ರ ಗಡುವು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 20:10 IST
Last Updated 23 ಡಿಸೆಂಬರ್ 2021, 20:10 IST

ಬೆಂಗಳೂ‌ರು: ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿಯ ವಂತಿಗೆಯನ್ನು 2022ರ ಜ.15ರ ಒಳಗೆ ಪಾವತಿಸಬೇಕು ಎಂದು ಕಾರ್ಮಿಕ ಕಲ್ಯಾಣ ಮಂಡಳಿ ತಿಳಿಸಿದೆ.

1965ರ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ ವ್ಯಾಪ್ತಿಗೆ ಬರುವ ಎಲ್ಲಾ ಕಾರ್ಖಾನೆಗಳು, ತೋಟಗಳು, ಕಾರ್ಯಗಾರಗಳು, ಮೋಟಾರು ಸಂಸ್ಥೆಗಳು, 50ಕ್ಕಿಂತ ಹೆಚ್ಚು ಕಾರ್ಮಿಕರಿರುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು 2020ನೇ ವರ್ಷಕ್ಕೆ ಸಂಬಂಧಿಸಿದ ವಂತಿಗೆಯನ್ನು ಆನ್‌ಲೈನ್‌ ಮೂಲಕ ಕಡ್ಡಾಯವಾಗಿ ಸಲ್ಲಿಸಬೇಕು.

ಪ್ರತಿಯೊಬ್ಬ ಕಾರ್ಮಿಕನಿಂದ ₹ 20, ಮಾಲೀಕರಿಂದ ಅಥವಾ ಸಂಸ್ಥೆಯಿಂದ ₹ 40 ಸೇರಿಸಿ ಒಟ್ಟು ₹ 60ನ್ನು ಕಾರ್ಖಾನೆಯಲ್ಲಿ ಅಥವಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಒಟ್ಟು ಕಾರ್ಮಿಕರ ಸಂಖ್ಯೆಗೆ ಅನುಗುಣವಾಗಿ ಪಾವತಿಸಬೇಕು. ಕಲ್ಯಾಣ ಆಯುಕ್ತರು ಈ ಬಗ್ಗೆ ತಪಾಸಣೆ ಕೈಗೊಳ್ಳಲಿದ್ದಾರೆ. ನಿಯಮ ಪಾಲಿಸದ ಸಂಸ್ಥೆಗಳಿಗೆ ಮೊದಲ 3 ತಿಂಗಳಿಗೆ ಶೇ 12ರಂತೆ ಹಾಗೂ ಅನಂತರ ತಿಂಗಳಿಗೆ ಶೇ 18ರಂತೆ ಬಡ್ಡಿ ವಿಧಿಸಲಾಗುತ್ತದೆ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.

ADVERTISEMENT

ಮಾಹಿತಿಗೆ ಮಂಡಳಿಯ ವೆಬ್‌ಸೈಟ್‌ (www.klwb.karnataka.gov.in) ನೋಡಬಹುದು.

ಸಂಪರ್ಕ: 8277291175/ 080–23475188

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.