ADVERTISEMENT

ನಂದಿನಿ ಉತ್ಪನ್ನಗಳ ದರ ಇಳಿಕೆ: ಕೆಎಂಎಫ್‌

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 13:45 IST
Last Updated 29 ಜೂನ್ 2021, 13:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ ನಿಯಮಿತವು ಕೋವಿಡ್‌ ಎರಡನೇ ಅಲೆಯ ಸಮಯದಲ್ಲಿ ಗ್ರಾಹಕರ ಹಿತ ಗಮನದಲ್ಲಿಟ್ಟುಕೊಂಡು ನಂದಿನಿ ತುಪ್ಪ, ಬೆಣ್ಣೆ ಹಾಗೂ ಹಾಲಿನ ಪುಡಿ ಉತ್ಪನ್ನಗಳ ಮಾರಾಟ ದರವನ್ನು ಇಳಿಕೆ ಮಾಡಿದೆ.

ನಂದಿನಿ ತುಪ್ಪದ ದರವನ್ನು ಪ್ರತಿ ಕೆಜಿಗೆ ₹20ರಷ್ಟು ಇಳಿಸಲಾಗಿದೆ. ಈ ಮೊದಲು₹470ಕ್ಕೆ ಮಾರಾಟವಾಗುತ್ತಿದ್ದ ಒಂದು ಕೆಜಿ ತುಪ್ಪವು ಈಗ₹450ಕ್ಕೆ ಗ್ರಾಹಕರ ಕೈಸೇರಲಿದೆ.₹440ಕ್ಕೆ ಮಾರಾಟವಾಗುತ್ತಿದ್ದ ಒಂದು ಕೆಜಿ ಬೆಣ್ಣೆಯು ₹420ಕ್ಕೆ ಸಿಗಲಿದೆ. ನಂದಿನಿ ಕೆನೆರಹಿತ ಹಾಲಿನ ಪುಡಿಯ ದರವನ್ನು ₹300ರಿಂದ₹270ಕ್ಕೆ ತಗ್ಗಿಸಲಾಗಿದೆ.

‘ಕೋವಿಡ್‌ ಸಮಯದಲ್ಲಿ ಕೆಎಂಎಫ್‌, ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಮೊದಲ ಅಲೆಯ ವೇಳೆ ನಂದಿನಿ ತುಪ್ಪ, ಬೆಣ್ಣೆಯ ಉತ್ಪನ್ನಗಳ ಮಾರಾಟ ದರ ಕಡಿತಗೊಳಿಸಲಾಗಿತ್ತು. ನಂದಿನಿ ಪನ್ನೀರ್‌ ಜೊತೆ ಚೀಸ್‌ ಅನ್ನು ಉಚಿತವಾಗಿ ನೀಡಲಾಗಿತ್ತು. ಈಗ ಮತ್ತೊಮ್ಮೆ ದರ ಇಳಿಸಲಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ವ್ಯವಸ್ಥಾಪಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.