ಬೆಂಗಳೂರು: ರೆಡ್ಡಿ ಸಮುದಾಯದವರು ಜಾತಿ ಜನಗಣತಿಯ ಸಮೀಕ್ಷೆಯಲ್ಲಿ ‘1105 ರೆಡ್ಡಿ’ ಎಂದೇ ನಮೂದಿಸಬೇಕು ಎಂದು ಕರ್ನಾಟಕ ರೆಡ್ಡಿ ಜನ ಸಂಘ ತಿಳಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಸ್. ಜಯರಾಮ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಎನ್. ಶೇಖರ ರೆಡ್ಡಿ ಅವರು, ‘ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಪ್ರಕಟಿಸಿರುವ ಪಟ್ಟಿಯಲ್ಲಿ ರೆಡ್ಡಿ ಸಮುದಾಯಕ್ಕೆ ಅನೇಕ ಸಮುದಾಯಗಳನ್ನು ಸೇರಿಸಿರುವುದು ಸರಿಯಲ್ಲ’ ಎಂದು ಹೇಳಿದರು.
‘ಆಯೋಗ ಪ್ರಕಟಿಸಿರುವ ಪಟ್ಟಿಯಲ್ಲಿ 1105–ರೆಡ್ಡಿ, 1106–ರೆಡ್ಡಿ ಕ್ರಿಶ್ಚಿಯನ್, 1107–ರೆಡ್ಡಿ ಲಿಂಗಾಯತ, 1079–ರಡ್ಡಿ ಲಿಂಗಾಯತ, 1109–ರೆಡ್ಡಿ ಬಲಜ, 1110–ರೆಡ್ಡಿ ದಾಸರ, 1111–ರೆಡ್ಡಿ ಗೌಂಡರ್ ಹಾಗೂ 1078–ರಡ್ಡಿ ಅಥವಾ ಶೈವರಡ್ಡಿ ಎಂಬ ಹಲವು ಹೆಸರಗಳನ್ನು ಸೇರಿಸಲಾಗಿದೆ’ ಎಂದು ತಿಳಿಸಿದರು.
‘ನಮ್ಮ ಸಮುದಾಯದಲ್ಲಿ ರೆಡ್ಡಿ ಎಂಬ ಶಬ್ದವನ್ನು ಹೊರೆತುಪಡಿಸಿ ಬೇರೆ ಯಾವುದೇ ಉಪ ಪಂಗಡಗಳು ಇರುವುದಿಲ್ಲ. ನಮ್ಮ ಸಮುದಾಯವನ್ನು ಈ ರೀತಿ ವಿಂಗಡಿಸುವುದರಿಂದ ನಮ್ಮ ಜನಸಂಖ್ಯೆ ಕಡಿಮೆ ಆಗುವ ಸಾಧ್ಯತೆ ಇದ್ದು, ನಮಗೆ ಅನ್ಯಾಯವಾಗಲಿದೆ. 1105–ರೆಡ್ಡಿ ಸಮುದಾಯದಲ್ಲಿ ಬೇರೆ ಯಾವುದೇ ಪಂಗಡಗಳನ್ನು ಸೇರಿಸಬಾರದು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.