
ಬೆಂಗಳೂರು: ಕರ್ನಾಟಕ ಟಿವಿ, ಟಾಕಿಂಗ್ ಪ್ಯಾರೆಟ್ಸ್ ಮತ್ತು ಎಡಿ6 ಅಡ್ವರ್ಟೈಸಿಂಗ್ ಜಂಟಿಯಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ‘ಕರುನಾಡ ಸುಧಾರಕರು’ ಕಾರ್ಯಕ್ರಮದಲ್ಲಿ ಏಳು ದಶಕಗಳಲ್ಲಿ ಕನ್ನಡ ನಾಡು ಕಂಡ ಅಪರೂಪದ ಸಾಧಕರ ಸಾಧನೆಯನ್ನು ದೃಶ್ಯ ರೂಪದಲ್ಲಿ ಸ್ಮರಿಸಲಾಯಿತು.
ಕರ್ನಾಟಕ ಏಕೀಕರಣಗೊಂಡು 70 ವರ್ಷಗಳಾದ ಪ್ರಯುಕ್ತ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಾಡು, ನುಡಿ, ನೆಲ, ಜಲದ ವಿಷಯಕ್ಕೆ ಎದ್ದು ನಿಲ್ಲುವ ಸ್ವಾಭಿಮಾನಿಗಳ ಶ್ರೇಷ್ಠತೆಯನ್ನು ಸ್ಮರಿಸಿ, ಅವರಿಗೆ ಗೌರವ ಸಮರ್ಪಿಸಲಾಯಿತು. ಮಯೂರ ವರ್ಮನಿಂದ ಈವರೆಗಿನ ಸಾಧಕರ ಸಾಧನೆಯ ಕಥೆಗಳನ್ನು ದೃಶ್ಯ ರೂಪದಲ್ಲಿ ಸ್ಮರಿಸಲಾಯಿತು. ನಾಡಿನ ಸಾಹಿತಿಗಳು, ಹೋರಾಟಗಾರರು, ಕ್ರಾಂತಿವೀರರು, ವಚನಕಾರರ ಮಾಹಿತಿ ಫಲಕಗಳನ್ನು ಪ್ರದರ್ಶಿಲಾಯಿತು.
ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಸಂಗೀತ ನಿರ್ದೇಶಕ ಹಂಸಲೇಖ, ‘ನಾಡ ಶಿಲ್ಪಿಗಳ ನಮನ ಕಾರ್ಯಕ್ರಮ ಸರ್ಕಾರಕ್ಕೂ ಮಾದರಿ’ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ, ಸಚಿವರಾದ ಎನ್. ಚಲುವರಾಯಸ್ವಾಮಿ, ಸಂತೋಷ್ ಲಾಡ್, ರಾಮಲಿಂಗಾರೆಡ್ಡಿ ಹಾಗೂ ಜಮೀರ್ ಅಹ್ಮದ್ ಖಾನ್, ಸಂಸದ ಡಾ.ಸಿ.ಎನ್. ಮಂಜುನಾಥ್ ಶ್ಲಾಘಿಸಿದರು.
ಶಾಸಕರಾದ ಟಿ.ಬಿ. ಜಯಚಂದ್ರ, ಎಸ್.ಆರ್. ವಿಶ್ವನಾಥ್, ಎಂ. ಕೃಷ್ಣಪ್ಪ, ಸಿ.ಕೆ. ರಾಮಮೂರ್ತಿ, ರವಿಕುಮಾರ್ ಗಣಿಗ, ಮುನಿರತ್ನ, ಬಸವರಾಜ ಶಿವಣ್ಣನವರ, ಜವರಾಯಿಗೌಡ,. ಮಾಜಿ ಶಾಸಕರಾದ ಸುರೇಶ್ ಗೌಡ, ರಮೇಶ್ ಗೌಡ, ಸಿ.ಎಸ್. ನಿರಂಜನ್, ಮಾಗಡಿ ಎ. ಮಂಜುನಾಥ್, ಅಜ್ಜಂಪೀರ್ ಖಾದ್ರಿ, ಎಂ.ಸಿ. ವೇಣುಗೋಪಾಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.