ADVERTISEMENT

ಯುಜಿ ವೈದ್ಯಕೀಯ: 26 ಸೀಟು ಹಂಚಿಕೆಗೆ ಇಂದು ಮತ್ತೊಂದು ಅವಕಾಶ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 23:40 IST
Last Updated 16 ಡಿಸೆಂಬರ್ 2025, 23:40 IST
<div class="paragraphs"><p>ಕೆಇಎ</p></div>

ಕೆಇಎ

   

ಬೆಂಗಳೂರು: ವೈದ್ಯಕೀಯ ಪದವಿ ಕೋರ್ಸ್ ಪ್ರವೇಶಕ್ಕೆ ಸ್ಟ್ರೇ ವೇಕೆನ್ಸಿ ಸುತ್ತಿನ ನಂತರ ಬಾಕಿ ಉಳಿದಿರುವ ಒಟ್ಟು 26 ಸೀಟುಗಳಿಗೆ ಡಿ.17ರಂದು ಮತ್ತೊಂದು ಸ್ಟ್ರೇ ವೇಕೆನ್ಸಿ ಸುತ್ತಿನ ಮೂಲಕ ಸೀಟು ಹಂಚಿಕೆ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತೀರ್ಮಾನಿಸಿದೆ.

ಹೊಸಕೋಟೆಯ ಎಂವಿಜೆ ವೈದ್ಯಕೀಯ ಕಾಲೇಜಿನಲ್ಲಿ 22 ಹಾಗೂ ಕಲಬುರಗಿಯ ಎಂಆರ್‌ಎಂಸಿ ವೈದ್ಯಕೀಯ ಕಾಲೇಜಿನಲ್ಲಿ 4 ಸೀಟು ಹಂಚಿಕೆಗೆ ಬಾಕಿ ಇದ್ದು, ಆಸಕ್ತ ಅರ್ಹರು ನಿಗದಿತ ಶುಲ್ಕದ ಡಿ.ಡಿ ಕೊಟ್ಟು ಈ ಸುತ್ತಿನಲ್ಲಿ ಭಾಗವಹಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ADVERTISEMENT

ಎರಡೂ ಕಾಲೇಜುಗಳಲ್ಲಿ ಇತರೆ ಕೋಟಾದಡಿ ಸೀಟುಗಳು ಲಭ್ಯ ಇದ್ದು, ಆಸಕ್ತರು ನಿಗದಿತ ಶುಲ್ಕದ ಡಿ.ಡಿ (ಎಂವಿಜೆ ಕಾಲೇಜಿಗೆ ₹40,11,950, ಎಂಆರ್‌ಎಂಸಿ ಕಾಲೇಜಿಗೆ 39,11,950) ಹಾಗೂ ಮೂಲ ದಾಖಲೆಗಳ ಸಮೇತ ಡಿ.17ರಂದು ಮಧ್ಯಾಹ್ನ 12 ಗಂಟೆಯೊಳಗೆ ಕೆಇಎ ಕಚೇರಿಯಲ್ಲಿ ಹಾಜರಾಗಬೇಕು. ಬಳಿಕ ಮಧ್ಯಾಹ್ನ 12ರಿಂದ 1 ಗಂಟೆವರೆಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅವಕಾಶ‌ ನೀಡಲಾಗುವುದು. ಅಂದೇ ಮಧ್ಯಾಹ್ನ 2 ಗಂಟೆಗೆ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಬಳಿಕ ಅದೇ ದಿನ ಆನ್‌ಲೈನ್ ಮೂಲಕ ಕಾಲೇಜಿಗೆ ಪ್ರವೇಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.