ADVERTISEMENT

ಕೆಂಗೇರಿ: ಕ್ರೀಡೆಗಳಿಗೆ ಜೀವನ ರೂಪಿಸುವ ಶಕ್ತಿ ಒದಗಿ ಬಂದಿದೆ– ಸಿ.ಎಂ.ಮಾರೇಗೌಡ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 19:53 IST
Last Updated 19 ಆಗಸ್ಟ್ 2025, 19:53 IST
ಕ್ರಿಕೆಟ್ ಹಾಗೂ ವಾಲಿಬಾಲ್ ಪಂದ್ಯಾವಳಿಯ ವಿಜೇತರಿಗೆ ಸಿ.ಎಂ.ಮಾರೇಗೌಡ ಬಹುಮಾನ ವಿತರಿಸಿದರು. ಟೊಯೊಟಾ ಕಾರ್ಮಿಕ ಸಂಘದ ಅಧ್ಯಕ್ಷ ದೀಪಕ್ ಎಸ್.ಆರ್.,  ಬಿಬಿಎಂಪಿ ಮಾಜಿ ಸದಸ್ಯ ರಾ.ಆಂಜಿನಪ್ಪ ಹನುಮಂತೇಗೌಡ, ದೇವರಾಜು, ನಾಗರಾಜು, ಜೆ.ರಮೇಶ್ ಇದ್ದಾರೆ. 
ಕ್ರಿಕೆಟ್ ಹಾಗೂ ವಾಲಿಬಾಲ್ ಪಂದ್ಯಾವಳಿಯ ವಿಜೇತರಿಗೆ ಸಿ.ಎಂ.ಮಾರೇಗೌಡ ಬಹುಮಾನ ವಿತರಿಸಿದರು. ಟೊಯೊಟಾ ಕಾರ್ಮಿಕ ಸಂಘದ ಅಧ್ಯಕ್ಷ ದೀಪಕ್ ಎಸ್.ಆರ್.,  ಬಿಬಿಎಂಪಿ ಮಾಜಿ ಸದಸ್ಯ ರಾ.ಆಂಜಿನಪ್ಪ ಹನುಮಂತೇಗೌಡ, ದೇವರಾಜು, ನಾಗರಾಜು, ಜೆ.ರಮೇಶ್ ಇದ್ದಾರೆ.    

ಕೆಂಗೇರಿ: ಕ್ರೀಡೆಗಳಿಗೆ ಶಿಕ್ಷಣದಷ್ಟೇ ಪ್ರಾಮುಖ್ಯತೆ ದೊರಕಬೇಕು. ಪ್ರಸ್ತುತ ಕ್ರೀಡೆಗಳಿಗೂ ಜೀವನ ರೂಪಿಸುವ ಶಕ್ತಿ ಒದಗಿ ಬಂದಿದೆ ಎಂದು ಬಿಜೆಪಿ ಯಶವಂತಪುರ ಕ್ಷೇತ್ರ ಘಟಕದ ಮಾಜಿ ಅಧ್ಯಕ್ಷ ಸಿ.ಎಂ.ಮಾರೇಗೌಡ ಹೇಳಿದರು.

ಶ್ರೀ ಪೂಜ್ಯ ಭಾರತ ಜನಜಾಗೃತಿ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಕ್ರಿಕೆಟ್ ಹಾಗೂ ವಾಲಿಬಾಲ್ ಪಂದ್ಯಾವಳಿಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. 

‘ಕೇಂದ್ರ ಸರ್ಕಾರವು ಕ್ರೀಡೆಗಳಿಗೆ ಉತ್ತಮ ಸಹಕಾರ ನೀಡುವುದರ ಜತೆಗೆ ಕ್ರೀಡಾಪಟುಗಳಿಗೆ ಅಗತ್ಯ ಬೆಂಬಲ ನೀಡುತ್ತಿದೆ. ಮನುಷ್ಯನ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆಗಳು ಬಹು ಮುಖ್ಯ ಪಾತ್ರ ವಹಿಸುತ್ತದೆ’ ಎಂದರು.  

ADVERTISEMENT

ಇದೇ ವೇಳೆ ವೇದಿಕೆ ವತಿಯಿಂದ ಬೀದಿಬದಿ ವ್ಯಾಪಾರಿಗಳಿಗೆ ಕೊಡೆಗಳನ್ನು ವಿತರಿಸಲಾಯಿತು. ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ, ಅಂಗವಿಕಲರಿಗೆ ಗಾಲಿ ಕುರ್ಚಿ, ವಾಕರ್ ಸ್ಟ್ಯಾಂಡ್‌ಗಳನ್ನು ನೀಡಲಾಯಿತು.

ಟೊಯೊಟಾ ಕಾರ್ಮಿಕ ಸಂಘದ ಅಧ್ಯಕ್ಷ ದೀಪಕ್ ಎಸ್.ಆರ್., ಬಿಬಿಎಂಪಿ ಮಾಜಿ ಸದಸ್ಯ ರಾ.ಆಂಜಿನಪ್ಪ ಹನುಮಂತೇಗೌಡ, ದೇವರಾಜು, ನಾಗರಾಜು, ಜೆ.ರಮೇಶ್, ಕುಮಾರ್, ಟೊಯೊಟಾ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.