ADVERTISEMENT

ಕೆಪೆಕ್: ಉತ್ಪನ್ನಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 22:00 IST
Last Updated 24 ಜನವರಿ 2026, 22:00 IST
<div class="paragraphs"><p>ಸಿ.ಎನ್. ಶಿವಪ್ರಕಾಶ್</p></div>

ಸಿ.ಎನ್. ಶಿವಪ್ರಕಾಶ್

   

ಬೆಂಗಳೂರು: ಸೆನರ್ಜಿ ಎಕ್ಸ್‌ಪೋಸರ್ಸ್‌ ಆ್ಯಂಡ್ ಇವೆಂಟ್ಸ್‌ ಇತ್ತೀಚೆಗೆ ತ್ರಿಪುರ ವಾಸಿನಿ
ಅರಮನೆ ಮೈದಾನದಲ್ಲಿ ಜನವರಿ 20ರಿಂದ 22ರವರೆಗೆ ನಡೆದ ಆಹಾರ ಮತ್ತು ಪಾನೀಯಗಳಿಗೆ ರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ (ಪಿಎಂಎಫ್‌ಎಂಇ) ಯೋಜನೆಯ 10 ಫಲಾನುಭವಿಗಳ ಉತ್ಪನ್ನಗಳನ್ನು ಪ್ರದರ್ಶಿಸಲಾಗಿತ್ತು.  

‘ಪಿಎಂಎಫ್‌ಎಂಇಯೋಜನೆಯ ಉದ್ದಿಮೆದಾರರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಉದ್ದೇಶ ಈ ಮೇಳದಲ್ಲಿ ಕೆಪೆಕ್‌ನ ಮಳಿಗೆಯನ್ನು ಸ್ಥಾಪಿಸಲಾಗಿತ್ತು.

ADVERTISEMENT

ಇಲ್ಲಿ ಸಿರಿಧಾನ್ಯ ಆಧಾರಿತ ಉತ್ಪನ್ನಗಳು, ಸಾಂಬಾರು ಪದಾರ್ಥಗಳು, ಎಣ್ಣೆ ಬೀಜ ಆಧಾರಿತ ಉತ್ಪನ್ನಗಳು, ಮಕ್ಕಳ ಆಹಾರ, ಕಡಲೆಕಾಯಿ, ಏಕದಳ, ದ್ವಿದಳ ಧಾನ್ಯಗಳ, ಬೇಕರಿ, ತೆಂಗು ಆಧಾರಿತ ಉತ್ಪನ್ನಗಳು, ಬಿಸ್ಕತ್ತು, ಐಸ್‌ಕ್ರೀಮ್‌ ಮತ್ತು ಬೆಲ್ಲ ಆಧಾರಿತ ಉತ್ಪನ್ನಗಳನ್ನು ಪ್ರದರ್ಶಿಸಲಾಗಿತ್ತು’ ಎಂದು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ (ಕೆಪೆಕ್‌) ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.