ADVERTISEMENT

ಕಣ್ಣೆದುರೇ ಕಂಡ ದೃಶ್ಯ, ಸಾಕ್ಷ್ಯ ಪರಿಗಣಿಸಿಲ್ಲ– ಖರ್ಗೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 20:14 IST
Last Updated 1 ಅಕ್ಟೋಬರ್ 2020, 20:14 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಬೆಂಗಳೂರು: 'ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿರುವುದು ಬೇಸರದ ವಿಷಯ. ಸಾಕ್ಷ್ಯಗಳನ್ನು ಪರಿಗಣಿಸದೆ ನ್ಯಾಯಾಂಗ ತೀರ್ಪು ನೀಡಿದ್ದು ಸರಿ ಕಾಣುತ್ತಿಲ್ಲ. ಜನರಿಗೆ ನ್ಯಾಯಾಂಗದ ಮೇಲಿನ ವಿಶ್ವಾಸ ಹೋಗುತ್ತದೆ’ ಎಂದು ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಖರ್ಗೆ, ‘ಮಸೀದಿ ಧ್ವಂಸವನ್ನು ಎಲ್ಲರೂ ನೋಡಿದ್ದಾರೆ. ಯಾರು ಮಸೀದಿ ‌ಮೇಲೆ‌ ಹತ್ತಿದ್ದರು, ಯಾರು ಯಾರ ಮೇಲೆ ಕುಳಿತಿದ್ದರು ಎಂಬುದು ಎಲ್ಲವೂ ಗೊತ್ತಿದೆ. ಕರಸೇವಕರು ಎಲ್ಲಿಂದ ಬಂದರು. ಇಟ್ಟಿಗೆ, ಕಟ್ಟಡ ನಿರ್ಮಾಣ ವಸ್ತುಗಳು ಎಲ್ಲಿಂದ ಬಂದವು’ ಎಂದು ಪ್ರಶ್ನಿಸಿದರು.

‘ಕರಸೇವಕರು ಅಲ್ಲಿಗೆ ಏಕಾಏಕಿ‌ ಹೋಗಲು ಸಾಧ್ಯವೇ. ಅದಕ್ಕೆ ಯಾರದಾದರೂ ಸಾಥ್ ನೀಡಬೇಕಲ್ಲವೇ. ಹಾಗಾದರೆ ಬಾಬರಿ ಮಸೀದಿ ಧ್ವಂಸ ಮಾಡಿದ್ದು ಯಾರು’ ಎಂದು ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.