ADVERTISEMENT

ವೈದ್ಯರು ಮನುಷ್ಯತ್ವ ಮರೆಯಬಾರದು: ಡಾ‌.ಸಿ.ರಾಮಚಂದ್ರ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 18:56 IST
Last Updated 9 ಜುಲೈ 2022, 18:56 IST
ಡಾ‌.ಸಿ.ರಾಮಚಂದ್ರ
ಡಾ‌.ಸಿ.ರಾಮಚಂದ್ರ   

ಬೆಂಗಳೂರು: ‘ಸಮಾಜದಲ್ಲಿ ವೈದ್ಯರಿಗೆ ವಿಶಿಷ್ಟ ಸ್ಥಾನವಿದೆ. ಇನ್ನೊಂದು ಜೀವ ಉಳಿಸುವ ಕಾಯಕದಲ್ಲಿ ನಿರತರಾಗಿರುವ ವೈದ್ಯರು ಮನುಷ್ಯತ್ಯ ಮರೆಯಬಾರದು’ ಎಂದುಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ‌.ಸಿ.ರಾಮಚಂದ್ರ ತಿಳಿಸಿದರು.

ಸಂಸ್ಥೆಯು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪದವಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಇನ್ನೊಬ್ಬರಿಗೆ ಜೀವ ನೀಡುವ ಶಕ್ತಿ ವೈದ್ಯರಿಗೆ ಮಾತ್ರ ಇರುತ್ತದೆ. ಇಂತಹ ಪುಣ್ಯದ ಕೆಲಸ ಮಾಡುತ್ತಿರುವ ವೈದ್ಯರು, ರೋಗಿಗಳನ್ನು ಮಾನವೀಯ ಗುಣಗಳಿಂದ ಕಾಣಬೇಕು’ ಎಂದು ಹೇಳಿದರು.

‘ನರ್ಸಿಂಗ್ ಶಿಕ್ಷಣದಲ್ಲಿ ಸಂಸ್ಥೆ ಮುಂಚೂಣಿಯಲ್ಲಿದೆ.ಇಲ್ಲಿನ ಮೌಲ್ಯಯುತ ಶಿಕ್ಷಣ ಹಾಗೂ ತರಬೇತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿದೇಶಗಳಿಂದಲೂ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬರುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಉದ್ಯಮಿ ಆರ್‌. ರಾಜಶೇಖರ್, ‘ಅನಾರೋಗ್ಯದ ಸ್ಥಿತಿಯನ್ನು ಆರೋಗ್ಯದತ್ತ ಕೊಂಡೊಯ್ಯವ ಪುಣ್ಯದ ಕೆಲಸವನ್ನು ವೈದ್ಯರು ಮಾಡುತ್ತಿದ್ದಾರೆ. ಅವರ ಸೇವೆಗೆ ಬೆಲೆ ಕಟ್ಟಲಾಗದು. ವೈದ್ಯಕೀಯವಿದ್ಯಾರ್ಥಿಗಳು ಸಮಾಜದಲ್ಲಿ ಸಿಗುವ ಉತ್ತಮ ಅವಕಾಶಗಳನ್ನು ಬಳಸಿಕೊಂಡು, ಉನ್ನತ ಸ್ಥಾನ ಪಡೆಯಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.