ADVERTISEMENT

ಕೆಎಂಎಫ್‌ ಹಾಲಿನ ಪ್ಯಾಕಿಂಗ್‌, ಸರಬರಾಜಿನ ಮೇಲೆ ನಿಗಾಗೆ ಎಐ ಬಳಕೆ!

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 23:58 IST
Last Updated 6 ಜನವರಿ 2026, 23:58 IST
<div class="paragraphs"><p>ಕೆಎಂಎಫ್‌</p></div>

ಕೆಎಂಎಫ್‌

   

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಲವು(ಕೆಎಂಎಫ್‌) ಹಾಲಿನ ಪ್ಯಾಕಿಂಗ್‌ ಹಾಗೂ ಸರಬರಾಜಿನ ಮೇಲೆ ನಿಗಾ ವಹಿಸಲು ಕೃತಕ ಬುದ್ದಿಮತ್ತೆ(ಎಐ) ಆಧಾರಿತ ಕ್ಯಾಮೆರಾಗಳ ಬಳಕೆಗೆ ಮುಂದಾಗಿದೆ.

ಪ್ಯಾಕಿಂಗ್‌ ಘಟಕದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸಂಗ್ರಹಿಸುವ ಕ್ರೇಟ್‌ಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಹಾಗೂ ಕಾರ್ಯಕ್ಷಮತೆ ವೃದ್ದಿಸಿ ಸುಧಾರಣೆ ತರುವ ಭಾಗವಾಗಿ ಮಹಾಮಂಡಲವು ಎಐ ತಂತ್ರಜ್ಞಾನಕ್ಕೆ ಮೊರೆ ಹೋಗಿದೆ.

‘ಮಹಾಮಂಡಲವು ಘಟಕಗಳಲ್ಲಿ ಎಐ ಆಧಾರಿತ ಕ್ಯಾಮೆರಾಗಳ ಅಳವಡಿಕೆಗೆ ಟೆಂಡರ್‌ ಆಹ್ವಾನಿಸಲಾಗಿದೆ. ಈ ಪ್ರಕ್ರಿಯೆಯನ್ನು ಒಂದೆರಡು ತಿಂಗಳಲ್ಲಿ ಪೂರ್ಣಗೊಳಿಸಿ ಜಾರಿಗೆ ತರಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಮೊದಲ ಹಂತದಲ್ಲಿ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ( ಬಮುಲ್‌) ವ್ಯಾಪ್ತಿಯ ಮೂರು ಘಟಕಗಳಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಬೆಂಗಳೂರಿನ ಮುಖ್ಯ ಘಟಕದಲ್ಲಿ ಎಂಟು, ಕನಕಪುರದ ರಾಷ್ಟ್ರೀಯ ಹಾಲು ಪ್ಯಾಕಿಂಗ್ ಕೇಂದ್ರ (ಎನ್‌ಎಂಪಿಸಿ) ಹಾಗೂ ಹೊಸಕೋಟೆಯ ಕೇಂದ್ರದಲ್ಲಿ ತಲಾ ಎರಡು ಎಐ ಕ್ಯಾಮೆರಾ ಅಳವಡಿಸಲಾಗುತ್ತದೆ.

ಈ ವ್ಯವಸ್ಥೆಯು ಕ್ರೇಟ್‌ಗಳು ಮತ್ತು ಪ್ಯಾಕೆಟ್‌ಗಳ ನಿರಂತರ ಟ್ರ್ಯಾಕಿಂಗ್ ಮತ್ತು ಮೇಲ್ವಿಚಾರಣೆಗಾಗಿ ಲೈವ್ ವಿಡಿಯೊ ಸ್ಟ್ರೀಮ್-ಆಧಾರಿತ ವಿಶ್ಲೇಷಣೆಯನ್ನು ಒಳಗೊಂಡಿರಲಿದೆ. ಉತ್ಪನ್ನಗಳನ್ನು ಸಾಗಿಸುವ ಯಂತ್ರಗಳ ನಿಷ್ಕ್ರಿಯತೆ, ಮಾನವ ಹಸ್ತಕ್ಷೇಪ ಸನ್ನಿವೇಶಗಳನ್ನು ಗುರುತಿಸಿ ನಿಖರ ಮಾಹಿತಿ ನೀಡಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.