ADVERTISEMENT

ಕೊಡಿಗೇಹಳ್ಳಿ‌ ಮನೆ ಮೇಲೆ ದಾಳಿ: ಶಂಕಿತರ ಬಳಿ 4 ಜೀವಂತ ಗ್ರೆನೇಡ್ ಜಪ್ತಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 9:40 IST
Last Updated 20 ಜುಲೈ 2023, 9:40 IST
ಶಂಕಿತರ
ಶಂಕಿತರ    

ಬೆಂಗಳೂರು: ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ‌ನಡೆಸಲು ಸಂಚು ರೂಪಿಸುತ್ತಿದ್ದ ಆರೋಪದಡಿ‌ ಬಂಧಿಸಲಾಗಿರುವ ಶಂಕಿತರ ಬಳಿ 4 ಜೀವಂತ ಗ್ರೆನೇಡ್‌ಗಳು ಪತ್ತೆಯಾಗಿವೆ.

ಹೆಬ್ಬಾಳ‌ ಠಾಣೆಯಲ್ಲಿ ದಾಖಲಾಗಿರುವ‌ ಪ್ರಕರಣದಲ್ಲಿ ಬಂಧಿಸಿರುವ ಶಂಕಿತರನ್ನು ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನು ಓದಿ: ಉಗ್ರರ ಟಾರ್ಗೆಟ್ ಬೆಂಗಳೂರು: ಸ್ಫೋಟಕ, ಶಸ್ತ್ರಾಸ್ತ್ರ ಸಹಿತ ಐವರು ಶಂಕಿತ ಉಗ್ರರ ಬಂಧನ

ADVERTISEMENT

'ಶಂಕಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಅವರು ನೀಡಿದ ಮಾಹಿತಿ ಆಧರಿಸಿ‌ ಮತ್ತಷ್ಟು ಸ್ಥಳಗಳಲ್ಲಿ ಶೋಧ ನಡೆಸಲಾಯಿತು. ಕೊಡಿಗೇಹಳ್ಳಿ ಮನೆ‌ ಮೇಲೂ ದಾಳಿ ನಡೆಸಲಾಯಿತು. ಅಲ್ಲಿಯೇ ಜೀವಂತ ಗ್ರೆನೇಡ್‌ಗಳು‌ ಸಿಕ್ಕಿವೆ. ಅವುಗಳನ್ನು ಜಪ್ತಿ ಮಾಡಲಾಗಿದೆ.

ಶಂಕಿತರು, ದೊಡ್ಡದಾದ ರೀತಿಯಲ್ಲಿ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಮಾಹಿತಿ ಲಭ್ಯವಾಗಿದೆ. ತನಿಖೆ ಮುಂದುವರಿಸಲಾಗಿದೆ' ಎಂದು‌ ಕಮಿಷನರ್ ಬಿ.ದಯಾನಂದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.