
ಪ್ರಜಾವಾಣಿ ವಾರ್ತೆ
ನೆಲಮಂಗಲ: ತಾಲ್ಲೂಕಿನ ಕೊಡಿಗೆಹಳ್ಳಿ ಲಕ್ಷ್ಮಣಸ್ವಾಮೀಜಿ ಆಶ್ರಮದ ಪೀಠಾಧ್ಯಕ್ಷ ಮೋಹನರಾಮ್ ಸ್ವಾಮೀಜಿ (73) ಗುರುವಾರ ಮಧ್ಯಾಹ್ನ ನಿಧನರಾದರು.
ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಮಧ್ಯಾಹ್ನ ಆಶ್ರಮದ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
1949ರಲ್ಲಿ ಲಕ್ಷ್ಣಣ ಸ್ವಾಮೀಜಿಯಿಂದ ಸ್ಥಾಪಿತವಾದ ಆಶ್ರಮವು ಶರಣ ಮಾಚಿದೇವ ಸಂಪ್ರದಾಯಕ್ಕೆ ಸೇರಿದ್ದು. ಆದರೂ, ಸರ್ವಜನಾಂಗದ ಪ್ರೀತಿ ಆದರಗಳಿಂದ ‘ನಮ್ಮೂರ ಮಠ’ ಎಂದೇ ಸುತ್ತಮುತ್ತಲ ಗ್ರಾಮಗಳಿಂದ ಖ್ಯಾತಿ ಪಡೆದು ಎಲ್ಲ ಸಮುದಾಯಗಳ ಒಗ್ಗಟ್ಟಿನ ಕೇಂದ್ರವಾಗಿದೆ. ಮೋಹನರಾಮ್ ಸ್ವಾಮೀಜಿ ಸ್ನಾತಕೋತ್ತರ ಪದವೀಧರರಾಗಿದ್ದು, 1984ರಲ್ಲಿ ಪೀಠಾಧ್ಯಕ್ಷರಾಗಿ ಆಧ್ಯಾತ್ಮಿಕ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದರು ಎಂದು ಮಠದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.