ADVERTISEMENT

ಕೆಪಿಸಿಸಿಯಿಂದ 125 ಆಂಬುಲೆನ್ಸ್

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 21:49 IST
Last Updated 5 ಜೂನ್ 2021, 21:49 IST
 ಕೆಪಿಸಿಸಿ ಸಾರ್ವಜನಿಕರಿಗಾಗಿ ನೀಡಿರುವ ಆಂಬುಲ್ಸ್‌ಗಳ ಜತೆ ಕಾಂಗ್ರೆಸ್ ಮುಖಂಡರು
 ಕೆಪಿಸಿಸಿ ಸಾರ್ವಜನಿಕರಿಗಾಗಿ ನೀಡಿರುವ ಆಂಬುಲ್ಸ್‌ಗಳ ಜತೆ ಕಾಂಗ್ರೆಸ್ ಮುಖಂಡರು   

ರಾಜರಾಜೇಶ್ವರಿನಗರ: ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಲು ಕೆಪಿಸಿಸಿಯಿಂದ 125 ಉಚಿತ ಆಂಬುಲೆನ್ಸ್‌ಗಳನ್ನು ಉಚಿತ ಸೇವೆಗೆ ಸಮರ್ಪಿಸಲಾಯಿತು.

ರಾಜರಾಜೇಶ್ವರಿ ನಗರದ ಗ್ಲೋಬಲ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಂಬುಲೆನ್ಸ್ ವಾಹನ ಚಾಲಕರು ಮತ್ತು ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಲಾಯಿತು.

‘ಸೋಂಕಿತರಿಂದ ಯಾವುದೇ ಹಣ ವಸೂಲಿ ಮಾಡಬಾರದು. ಹಾಗೆ ಮಾಡಿದರೆ ಬಿಜೆಪಿಯವರು ವಿಡಿಯೊ ಮಾಡಿ ಹರಿಬಿಟ್ಟು ಪಕ್ಷಕ್ಕೆ ಕೆಟ್ಟ ಹೆಸರು ತರುತ್ತಾರೆ. ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ADVERTISEMENT

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ‘ಕುತಂತ್ರ, ಅಬ್ಬರದ ಪ್ರಚಾರ, ಸುಳ್ಳು ಹೇಳುವ ಮೂಲಕ ಬಿಜೆಪಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ರಾಜ್‍ಕುಮಾರ್, ಕಾಂಗ್ರೆಸ್ ಮುಖಂಡ ಎಚ್. ಕುಸುಮಾ, ಹನುಮಂತರಾಯಪ್ಪ ಮಾತನಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕುಣಿಗಲ್ ಶಾಸಕ ಡಾ.ರಂಗನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ, ಮುಖಂಡ ಮಹಮದ್ ನಲಪಾಡ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.