ಕೆ.ಆರ್.ಪುರ: ‘ಕ್ಷೇತ್ರದ ಜನರು ನನ್ನ ಮೇಲೆ ನಂಬಿಕೆ ಇಟ್ಟು ಬೆಂಬಲಿಸುತ್ತಿದ್ದಾರೆ. ಕ್ಷೇತ್ರದ ಜನರ ಪ್ರೀತಿಗೆ ಚಿರರುಣಿಯಾಗಿವೆ. ಕ್ಷೇತ್ರದಲ್ಲಿ ಅಭಿವೃದ್ಧಿಯ ಮೂಲಕ ಜನರ ಕಷ್ಟಗಳನ್ನು ಅರಿಯುವೆ’ ಎಂದು ಶಾಸಕ ಬೈರತಿ ಬಸವರಾಜ ಹೇಳಿದರು.
ತಮ್ಮ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು, ಕಾರ್ಯಕರ್ತರು ಹಮ್ಮಿಕೊಂಡಿದ್ದ ಸೇವಾ ಕಾರ್ಯಗಳಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್, ‘ಶಾಸಕ ಬೈರತಿ ಬಸವರಾಜ ಅವರ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿದ್ದೇವೆ. ಸಾರ್ವಜನಿಕರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದ್ದಾರೆ’ ಎಂದರು.
ಇದೇ ವೇಳೆ ನೂರಾರು ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಬೈರತಿ ಬಸವರಾಜ ಅವರಿಗೆ ಶುಭಾಶಯ ಕೋರಿದರು. ವಿಜ್ಞಾನಗರ ಅಸೋಸಿಯೇಷನ್ ಮತ್ತು ಲಯನ್ಸ್ ಕ್ಲಬ್ ಮತ್ತು ಎಸ್.ಕೆ.ಎಫ್ ಫೌಂಡೇಶನ್ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ನೂರಾರು ಜನರು ರಕ್ತದಾನ ಮಾಡಿದರು.
ಪಾಲಿಕೆ ಮಾಜಿ ಸದಸ್ಯರಾದ ಶ್ರೀಕಾಂತ್, ಪಿ.ಜೆ.ಅಂತೋಣಿಸ್ವಾಮಿ, ಸುರೇಶ್, ಮುಖಂಡರಾದ ಹೇಮಂತ್ ಚಿನ್ನಿ, ಭಟ್ಟರಹಳ್ಳಿ ರಾಖಿ, ಎಂ.ಎಲ್.ಡಿ.ಸಿ ಮುನಿರಾಜು, ನಾಗೇನಹಳ್ಳಿ ಲೋಕೇಶ್, ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.