ಬೆಂಗಳೂರು: ಇಲ್ಲಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಮೂರು ದಿನಗಳಲ್ಲಿ 11 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ. ರೈತರೇ ಅಲ್ಲದೆ ಶಾಲಾ ವಿದ್ಯಾರ್ಥಿಗಳು, ಯುವಜನರು ಸೇರಿ ಎಲ್ಲ ವಯೋಮಾನದ ಜನರನ್ನೂ ಆಕರ್ಷಿಸುವಲ್ಲಿ ಮೇಳ ಯಶಸ್ವಿಯಾಗಿದೆ.
ಮೊದಲ ದಿನ ಮೇಳಕ್ಕೆ ಅಂದಾಜು 1.5 ಲಕ್ಷ ಜನ ಭೇಟಿ ನೀಡಿದ್ದರೆ, ಎರಡನೇ ದಿನ 3.5 ಲಕ್ಷ ಬಂದಿದ್ದರು.
‘ವಾರಾಂತ್ಶದ ದಿನವಾದ ಶನಿವಾರ ಗರಿಷ್ಠ ಅಂದರೆ 6 ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿದ್ದಾರೆ’ ಎಂದು ಕೃಷಿ ವಿಶ್ವವಿದ್ಯಾಲಯ ಹೇಳಿಕೆ ತಿಳಿಸಿದೆ. ಭಾನುವಾರ ಮೇಳದ ಕಡೆಯ ದಿನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.