ADVERTISEMENT

ಕೃಷ್ಣದೇವರಾಯ ಜಯಂತಿ: ಇಂದು ಬೈಕ್ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2025, 0:49 IST
Last Updated 16 ಫೆಬ್ರುವರಿ 2025, 0:49 IST
ಶ್ರೀಕೃಷ್ಣದೇವರಾಯ
ಶ್ರೀಕೃಷ್ಣದೇವರಾಯ   

ಕೆ.ಆರ್.ಪುರ: ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯರ 555ನೇ ಜಯಂತ್ಯುತ್ಸವ ಅಂಗವಾಗಿ ಭಾನುವಾರ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಬಲಿಜ ಯುವಶಕ್ತಿ ಸಮಿತಿ ಅಧ್ಯಕ್ಷ ಕೆ.ಟಿ.ರಾಜಕುಮಾರ್ ತಿಳಿಸಿದರು. 

ಕೆ.ಆರ್.ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ ಆವಲಹಳ್ಳಿಯ ಶ್ರೀಮುನೇಶ್ವರಸ್ವಾಮಿ ದೇವಸ್ಥಾನದಿಂದ ಕೆ.ಆರ್.ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದವರೆಗೂ ಬೈಕ್ ರ್‍ಯಾಲಿ ನಡೆಯಲಿದೆ.

ಶ್ರೀಕೃಷ್ಣದೇವರಾಯರ ಜಯಂತಿ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀಕೈವಾರ ಕ್ಷೇತ್ರದ ಧರ್ಮದರ್ಶಿ ಎಂ.ಆರ್.ಜಯರಾಮ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಪಿ.ಸಿ.ಮೋಹನ್, ಶಾಸಕ ಬೈರತಿ ಬಸವರಾಜ ಹಾಗೂ ಧಾರ್ಮಿಕ ಗುರುಗಳು, ಬಲಿಜ ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು  ಸಮಿತಿ ಗೌರವಾಧ್ಯಕ್ಷ ಆರ್.ಸುರೇಂದ್ರ ಹೇಳಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.