ಬೆಂಗಳೂರು: ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಜನ್ಮದಿನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆ.ಎಸ್. ನರಸಿಂಹ ಸ್ವಾಮಿ ಟ್ರಸ್ಟ್ ವತಿಯಿಂದ ಅಚರಿಸಲಾಯಿತು.
ಶಾಸಕ ರವಿ ಸುಬ್ರಹ್ಮಣ್ಯ ಅವರು ಕೆ.ಎಸ್.ನ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ರಂಗ ನಿರ್ದೇಶಕ ಬಿ.ವಿ. ರಾಜಾರಾಂ ನೇತೃತ್ವದಲ್ಲಿ ‘ಮೈಸೂರು ಮಲ್ಲಿಗೆ’ ನಾಟಕ ಪ್ರದರ್ಶನ ನಡೆಯಿತು.
ಕಲಾವಿದ ಪಿ. ಶಿವಶಂಕರ್ ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ’ ಗೀತೆ ಹಾಡಿದರು. ಸುಮಾ, ಜಯಲಕ್ಷ್ಮಿ ಜಿತೇಂದ್ರ ತಂಡದಿಂದ ಕೆ.ಎಸ್. ನರಸಿಂಹಸ್ವಾಮಿ ಅವರ ಹಾಡುಗಳಿಗೆ ನೃತ್ಯ ಮಾಡಿದರು. ಪಿ.ಎನ್. ಜಯರಾಂ, ರೂಪಾ ಮುರಳಿ, ಇಂದಿರಾ ಮತ್ತು ತಂಡದವರ ಸುಗಮ ಸಂಗೀತ, ಅಭಿಷೇಕ್ ರಾಮ ಪ್ರಸಾದ್ ತಂಡದಿಂದ ವಾದ್ಯ ವೈಭವ ನಡೆಯಿತು. ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ, ಸದಸ್ಯರಾದ ಮೇಖಲಾ ವೆಂಕಟೇಶ್, ಎಂ.ಎನ್. ಸುಬ್ರಹ್ಮಣ್ಯ, ಸನತ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.