ಬೆಂಗಳೂರು: ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯಿಂದ (ಪಿಆರ್‌ಸಿಐ) ಕೆಎಸ್‌ಆರ್‌ಟಿಸಿಗೆ 9 ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ.
ಪಿಆರ್‌ಸಿಐಯ 15ನೇ ವಿಶ್ವ ಸಂವಹನ ಸಮ್ಮೇಳನ ಮತ್ತು ಎಕ್ಸಲೆನ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಿಜಿಟಲ್ ಮೀಡಿಯಾ ಇನೋವೇಶನ್ ಮತ್ತು ಹೌಸ್ ಜರ್ನಲ್ ಪ್ರಿಂಟ್ (ಪ್ರಾದೇಶಿಕ) ವಿಭಾಗದಲ್ಲಿ ಚಿನ್ನದ ಪದಕ, ಹೆಲ್ತ್ ಕೇರ್ ಕಮ್ಯುನಿಕೇಶನ್ ಫಿಲ್ಮ್ಸ್ ವಿಭಾಗದಲ್ಲಿ ಬೆಳ್ಳಿ ಪದಕ, ವಿಶಿಷ್ಟ ಮಾನವ ಸಂಪನ್ಮೂಲ ಕಾರ್ಯಕ್ರಮಕ್ಕಾಗಿ ಕಂಚಿನ ಪದಕ ಪಡೆಯಿತು.
ಗ್ರಾಹಕ ಸೇವಾ ಶ್ರೇಷ್ಠತೆ, ಬ್ಯಾಂಡಿಂಗ್, ವೆಬ್‌ಸೈಟ್ ಮತ್ತು ಮೈಕ್ರೋಸೈಟ್, ಕಾರ್ಪೊರೇಟ್ ಫಿಲ್ಮ್ಸ್, ಮಾರ್ಕೆಟಿಂಗ್ ಕ್ಯಾಂಪೇನ್ ಮತ್ತು ಆಂತರಿಕ ಕಮ್ಯುನಿಕೇಶನ್ ಕ್ಯಾಂಪೇನ್ ವಿಭಾಗಗಳಲ್ಲಿ ಪ್ರಶಸ್ತಿ ಪಡೆಯಿತು.
ಕೆಎಸ್‌ಆರ್‌ಟಿಸಿ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್, ಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು ಪ್ರಶಸ್ತಿ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.