ADVERTISEMENT

ಕುಂದು ಕೊರತೆ: ಹದಗೆಟ್ಟ ರಸ್ತೆಗೆ ಕಾಯಕಲ್ಪ ನೀಡಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 23:37 IST
Last Updated 18 ಆಗಸ್ಟ್ 2024, 23:37 IST
ಗುಬ್ಬಲಾಳದ ಡ್ರೀಮ್ಸ್‌ ಅಪಾರ್ಟ್‌ಮೆಂಟ್‌ ರಸ್ತೆಯ ದುಸ್ಥಿತಿ.
ಗುಬ್ಬಲಾಳದ ಡ್ರೀಮ್ಸ್‌ ಅಪಾರ್ಟ್‌ಮೆಂಟ್‌ ರಸ್ತೆಯ ದುಸ್ಥಿತಿ.   
‘ಗುಬ್ಬಲಾಳ: ರಸ್ತೆ ದುರಸ್ತಿಗೊಳಿಸಿ’

ಬಿಬಿಎಂ‍ಪಿ ವಾರ್ಡ್‌ ಸಂಖ್ಯೆ 184ರ ಗುಬ್ಬಲಾಳದ ದೀಪಿಕಾ ಗಾರ್ಡನ್, ಜೆ.ಎನ್. ಡ್ರೀಮ್ಸ್ ಅಪಾರ್ಟ್‌ಮೆಂಟ್‌ಗೆ ಸಂಪರ್ಕ ಕಲ್ಪಿಸುವ 80 ಅಡಿ ರಸ್ತೆ ತುಂಬಾ ಗುಂಡಿಗಳು. ದ್ವಿಚಕ್ರ ವಾಹನ ಸವಾರರು, ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಓಡಾಡಲು ತೀವ್ರ ತೊಂದರೆಯಾಗಿದೆ. ಈ ರಸ್ತೆ ಮಳೆಗಾಲದಲ್ಲಿ ಕೆಸರು ಗದ್ದೆಯಂತಾದರೆ, ಬೇಸಿಗೆಯಲ್ಲಿ ವಾಹನ ಸವಾರರಿಗೆ ದೂಳಿನ ಮಜ್ಜನ ಮಾಡಿಸುತ್ತದೆ. ರಸ್ತೆ ಸಮಸ್ಯೆಯಿಂದಾಗಿ ಈ ಭಾಗಕ್ಕೆ ಆಟೊ, ಕ್ಯಾಬ್‌ ಚಾಲಕರು ಬರಲು ನಿರಾಕರಿಸುತ್ತಾರೆ. ಬಿಬಿಎಂಪಿ ಅಧಿಕಾರಿಗಳು ಕೂಡಲೇ ಇಲ್ಲಿನ ರಸ್ತೆ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು.

- ಸೋಮಶೇಖರ್, ಗುಬ್ಬಲಾಳ

‘ಹದಗೆಟ್ಟ ರಸ್ತೆಗೆ ಕಾಯಕಲ್ಪ ನೀಡಿ’

ಹೆಬ್ಬಾಳದ ಕೆಂಪಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ಗುಂಡಿಮಯವಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದು, ಗುಂಡಿಗಳಿಂದಾಗಿ ಸಂಚಾರ ದಟ್ಟಣೆಯಾಗುತ್ತಿದೆ. ಅಪಘಾತಗಳು ಸಂಭವಿಸುತ್ತಿವೆ. ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ಸಂಚಾರ ಇನ್ನೂ ದುಸ್ತರ. ಈ ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ಬಿಬಿಎಂಪಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ.

ADVERTISEMENT

- ಶಿವಪ್ರಸಾದ್, ಕೆಂಪಾಪುರ

‘ರಸ್ತೆಯಲ್ಲಿನ ಕಸ ತೆರವುಗೊಳಿಸಿ’

ನಂದಿನಿ ಬಡಾವಣೆಯ ಎಪಿಎಂಸಿ ಕ್ವಾಟರ್ಸ್‌ ಹಿಂಭಾಗದ 6ನೇ ಅಡ್ಡರಸ್ತೆಯಲ್ಲಿ ಕಸ ಹಾಕಲಾಗುತ್ತಿದೆ. ಸ್ಥಳೀಯರು ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ಹಾಕಿಕೊಂಡು ಬಂದು ಇಲ್ಲಿ ಎಸೆದು ಹೋಗುತ್ತಿದ್ದಾರೆ. ಈ ರಸ್ತೆಯಲ್ಲ ಗಬ್ಬೆದ್ದು ನಾರುತ್ತಿದ್ದು, ಸೊಳ್ಳೆಗಳ ಉಗಮ ಸ್ಥಾನವಾಗಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಬಿಬಿಎಂಪಿ ಸಿಬ್ಬಂದಿ ಕೂಡಲೇ ಇಲ್ಲಿನ ಕಸವನ್ನು ತೆರವುಗೊಳಿಸಬೇಕು. ಈ ರಸ್ತೆಯಲ್ಲಿ ಕಸ ಹಾಕದಂತೆ ಬಿಬಿಎಂಪಿ ಕ್ರಮ ಕೈಗೊಳ್ಳಬೇಕು.

- ಗಂಗರಾಜು ಕೆ.ಎಸ್., ನಂದಿನಿ ಬಡಾವಣೆ

’ಗುಂಡಿಗಳನ್ನು ಮುಚ್ಚಿ, ರಸ್ತೆ ಸರಿಪಡಿಸಿ’

ಕೆ.ಆರ್. ಪುರ ವಿಧಾನಸಭೆ ವ್ಯಾಪ್ತಿಯ ಬಸವನಪುರ ವಾರ್ಡ್‌ನ ಮೇಡಹಳ್ಳಿಯ ಬಿಬಿಎಂಪಿ ಸಹಾಯಕ ಕೇಂದ್ರ ಎದುರಿನ ಮುಖ್ಯರಸ್ತೆ ಗುಂಡಿಗಳಿಂದ ಕೂಡಿದೆ. ಇದರಿಂದ, ವಾಹನ ಸವಾರರಿಗೆ ಅನನಕೂಲವಾಗಿದೆ. ರಸ್ತೆ ಹಾಳಾದ ಪರಿಣಾಮ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಆಗುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ. ಮಳೆ ಬಂದಾಗ ರಸ್ತೆ ಯಾವುದು ಗುಂಡಿ ಯಾವುದು ಗೊತ್ತಾಗುವುದಿಲ್ಲ. ಬಿಬಿಎಂಪಿ ಕೂಡಲೇ ಈ ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.

- ಕಿರಣ್ ಕುಮಾರ್ ಜೆ., ಮೇಡಹಳ್ಳಿ

ಹೆಬ್ಬಾಳದ ಕೆಂಪಾಪುರ ಮುಖ್ಯರಸ್ತೆಯಲ್ಲಿ ಗುಂಡಿಗಳು
ನಂದಿನಿ ಬಡಾವಣೆಯ 6ನೇ ಅಡ್ಡರಸ್ತೆಯಲ್ಲಿ ಹಾಕಿರುವ ಕಸ.
ಕೆ.ಆರ್. ಪುರದ ಬಸವನಪುರದ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.